ವಿದ್ಯಾವಿಕಾಸ ಶಾಲೆ ವಿದ್ಯಾರ್ಥಿಗೆ 4ನೇ ರ‌್ಯಾಂಕ್

ctd 3 vvikasa
Published on

ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ವಿದ್ಯಾರ್ಥಿ ಕಲ್ಯಾಣಬಾಬು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 622ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ರ‌್ಯಾಂಕ್ ಪಡೆದಿದ್ದಾರೆ.

ಶಾಲೆಯ ಕೆ.ಇಂದು(621), ಆಸೇಚನ ಪಿ. ದಾಸರಿ, ಸಿ.ಜೆ. ಕಾವ್ಯಶ್ರೀ, ಎಂ.ಜೆ. ಕೀರ್ತನಾ 620 ಅಂಕಗಳನ್ನು ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ 147 ವಿದ್ಯಾರ್ಥಿಗಳಲ್ಲಿ 90 ಅತ್ಯುನ್ನತ ಶ್ರೇ ಣಿ, 45 ಪ್ರಥಮ, 6 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಪ್ರಥಮ ಭಾಷೆ ಕನ್ನಡದಲ್ಲಿ 8 ವಿದ್ಯಾರ್ಥಿಗಳು 125, ದ್ವಿತೀಯ ಭಾಷೆ ಇಂಗ್ಲಿಷ್‌ನಲ್ಲಿ 9, ತೃತೀಯ ಭಾಷೆ ಹಿಂದಿಯಲ್ಲಿ 14, ಗಣಿತದಲ್ಲಿ 8, ಜ್ಞಾನದಲ್ಲಿ 9, ಸಮಾಜ ವಿಜ್ಞಾನದಲ್ಲಿ 13 ವಿದ್ಯಾರ್ಥಿಗಳು ಶೇ.100 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಪ್ರಮುಖರು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net