ವಿದ್ಯಾವಂತರಿಂದ ಸಂವಿಧಾನದ ಅರಿವು ಮೂಡಲಿ

27 MANJU 04
Published on

ಹೊಸಪೇಟೆ: ದೇಶದ ವಿಶಾಲವಾದ ಸಂವಿಧಾನ ಓದಿ ಅರ್ಥೈಸಿಕೊಂಡAತಹ ವಿದ್ಯಾಂವAತರು ಅದರ ಮಹತ್ವವನ್ನು ದೇಶದ ಎಲ್ಲಾ ನಾಗರಿಕರಿಗೆ ತಿಳಿಸಬೇಕು ಎಂದು ಜಿ.ಪಂ. ಸಿಇಓ ನೋಂಗ್ಜಾಯ್ ಮಹಮ್ಮದ್ ಅಲಿ ಅಕ್ರಂ ಶಾ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ದೇಶದ ಸಂವಿಧಾನವು ದೇಶದ ಸುಗಮ ಆಡಳಿತಕ್ಕಾಗಿ ಮತ್ತು ನಾಗರಿಕ ಹಕ್ಕುಗಳ ಸಂರಕ್ಷಣೆಗೆ ರಚಿಸಲಾದ ಅತ್ಯಂತ ಮಹತ್ವದ ದಸ್ತಾವೇಜಾಗಿದೆ. ಸಂವಿಧಾನ ಪೀಠಿಕೆಯು ಭಾರತದ ಭವಿಷ್ಯ, ಮೂಲಭೂತ ಮೌಲ್ಯಗಳು, ಮತ್ತು ದಾರ್ಶನಿಕರ ಗುರಿಗಳನ್ನು ಬಿಂಬಿಸುವ ಪ್ರಮುಖ ಭಾಗವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಮಾತನಾಡಿ, ಭಾರತದ ಸಂವಿಧಾನವು ವಿಶ್ವದ ಅತ್ಯಂತ ವಿಶಾಲ ಮತ್ತು ಲಿಖಿತ ಸಂವಿಧಾನವಾಗಿದ್ದು, ಇದು ದೇಶದ ಆಡಳಿತ ವ್ಯವಸ್ಥೆಯ ನಿರ್ವಹಣೆ ಮತ್ತು ಪ್ರಜೆಗಳ ಹಕ್ಕು ಮತ್ತು ಕರ್ತವ್ಯಗಳನ್ನು ನಿರ್ಧರಿಸುತ್ತದೆ. ಸಂವಿಧಾನದ ಪ್ರಮುಖ ಅಂಶಗಳಲ್ಲಿ ಮೂಲ ಭೂತ ಹಕ್ಕುಗಳು, ರಾಜ್ಯ ನೀತಿ ನಿರ್ದೇಶಕ ತತ್ವಗಳು, ಮತ್ತು ಮೂಲ ಭೂತ ಕರ್ತವ್ಯಗಳು ಪ್ರಮುಖ ಸ್ಥಾನ ಪಡೆದಿವೆ. ಮೂಲಭೂತ ಹಕ್ಕುಗಳು ಪ್ರತಿಯೊಬ್ಬ ಭಾರತೀಯ ಪ್ರಜೆಗೆ ಜೀವನ, ಸಮಾನತೆ, ಧಾರ್ಮಿಕ ಸ್ವಾತಂತ್ರ‍್ಯ, ಮತ್ತು ಶಿಕ್ಷಣದಂತಹ ಪ್ರಮುಖ ಹಕ್ಕುಗಳನ್ನು ನೀಡುತ್ತವೆ ಎಂದರು.

ಜಿ.ಪA. ಉಪ ಕಾರ್ಯದರ್ಶಿ ಭೀಮಪ್ಪ ಲಾಳಿ, ಮುಖ್ಯ ಯೋಜನಾಧಿಕಾರಿ ಅನ್ನದಾನ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net