ಮೈಸೂರು: ನಗರದ ಜೆಎಲ್‌ಬಿ ರಸ್ತೆಯ ಮೆಟ್ರೋಪೋಲ್ ಹೋಟೆಲ್ ಬಳಿ ಇರುವ ಶ್ರೀಮದ್ದಾನೇಶ್ವರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಹಾಗೂ ನಂತರದ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಊಟ, ತಿಂಡಿ, ವಸತಿ ಸೌಲಭ್ಯಗಳು ಕಡಿಮೆ ದರದಲ್ಲಿ ದೊರೆಯಲಿದೆ. ಆಸಕ್ತರು ಮೊಬೈಲ್ ಸಂಖ್ಯೆ 8884565185 ಅನ್ನು ಸಂಪರ್ಕಿಸುವಂತೆ ವಿದ್ಯಾರ್ಥಿನಿಲಯದ ಕಾರ್ಯದರ್ಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.