ವಿದ್ಯಾರ್ಥಿನಿಯರಿಂದಲೇ ಹಾಸ್ಟೆಲ್ ಸ್ವಚ್ಛತೆ

24mnv01
Published on

ಮಾನ್ವಿ: ಪಟ್ಟಣದ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಶೌಚಗೃಹಗಳನ್ನು ವಿದ್ಯಾರ್ಥಿನಿಯರೇ ಸ್ವಚ್ಛಗೊಳಿಸಬೇಕೆಂದು ವಾರ್ಡನ್ ರಜಿಯಾ ತಾಕೀತು ಮಾಡುತ್ತಿದ್ದಾರೆ ಎಂದು ವಸತಿ ನಿಲಯದಲ್ಲಿರುವ ವಿದ್ಯಾರ್ಥಿನಿಯರು ಅರೋಪಿಸಿದ್ದಾರೆ.

ಶೌಚಗೃಹ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಕಸ ಬಿದ್ದರೂ ತೆಗೆಯಬೇಕು. ಇತರ ಕೆಲಸಗಳನ್ನೂ ನಾವೇ ಮಾಡಬೇಕು ಎನ್ನುತ್ತಿದ್ದಾರೆ. ವಸತಿ ನಿಲಯದ ಶೌಚಗೃಹಗಳ ಸ್ವಚ್ಛತೆಗೆ ಹಣವಿದ್ದರೂ ಅದನ್ನು ಬಳಕೆ ಮಾಡುವುದಿಲ್ಲ. ನಮಗೆ ಕೆಲಸ ನೀಡುತ್ತಿದ್ದಾರೆ. ನಾವು ಓದಲು ಬಂದಿದ್ದೇವೆಯೇ ಅಥವಾ ವಸತಿ ನಿಲಯದ ಸ್ವಚ್ಛ ಮಾಡಲು ಬಂದಿದ್ದೇವೆಯೇ ಎಂದು ವಿದ್ಯಾರ್ಥಿನಿಯರು ವಿಡಿಯೋ ಮಾಡಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಕಳಿಸಿದ್ದಾರೆ. ವಿದ್ಯಾರ್ಥಿಗಳಿಂದ ಕೆಲಸ ಮಾಡಿಸುವ ಬಗ್ಗೆ ತಾಲೂಕು ಬಿಸಿಎಂ ಅಧಿಕಾರಿ ಮಹಾಲಿಂಗಪ್ಪಗೆ ಮಾಹಿತಿ ನೀಡಿದರೂ ವಾರ್ಡನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಕೂಡಲೇ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net