

ಬಸವಕಲ್ಯಾಣ: ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಕಲಿತ ಘೋಟಾಳದ ವಿದ್ಯಾರ್ಥಿನಿ ಸುಪ್ರಿಯಾ ಡಿ. ಸರ್ಕಾರಿ ಕೋಟಾದಲ್ಲಿ ಎಂಬಿಬಿಎಸ್ ಸೀಟ್ ಪಡೆದಿದ್ದರೂ, ಶುಲ್ಕ ಭರಿಸಲು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ಗಮನಿಸಿ ನೆರವಿಗೆ ಪ್ರೌಢ ಶಾಲೆ ಶಿಕ್ಷಕರ ಸಂಘದ ಪ್ರಯತ್ನ ಹಾಗೂ ವಿಜಯವಾಣಿ ಪತ್ರಿಕೆಯ ವಿಶೇಷ ವರದಿಗೆ ಸ್ಪಂದನೆ ಸಿಕ್ಕಿದ್ದು, ನೆರವಿನ ಮಹಾಪುರ ಹರಿದು ಬಂದಿದೆ.
ಯಾದಗಿರಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದು, ವಿದ್ಯಾರ್ಥಿನಿಗೆ ಶಿಕ್ಷಕರು, ಸಾರ್ವಜನಿಕರು, ಮರಾಠ ನೌಕರರ ಬಳಗವೂ ಆರ್ಥಿಕ ನೆರವು ನೀಡಿದ್ದು, ಎಂಬಿಬಿಎಸ್ ಶಿಕ್ಷಣದ ದಾರಿ ಸುಗಮವಾಗಿದೆ.
ವಿಜಯವಾಣಿಯಲ್ಲಿ ಸೆ.೧೪ರಂದು `ವೈದ್ಯೆಯಾಗೋ ಕನಸಿಗೆ ಬೇಕಿದೆ ಸಹಾಯಹಸ್ತ' ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ರಾಜ್ಯ ಪ್ರೌಢ ಶಾಲಾ ಶಿಕಕ್ಷಕರ ಸಂಘದ ಬಸವಕಲ್ಯಾಣ ಹಾಗೂ ಹುಲಸೂರ ತಾಲೂಕು ಘಟಕ ವಾಟ್ಸ್ ಆ್ಯಪ್‌ನಲ್ಲಿ ಸಹಾಯ ಕೋರಿತ್ತು.
ಶಿಕ್ಷಕರ ಸಂಘದ ಪ್ರಯತ್ನಕ್ಕೆ ೧.೨೭ ಲಕ್ಷ ರೂ., ಮರಾಠ ನೌಕರರ ಬಳಗದಿಂದ ೧.೭೧ ಲಕ್ಷ ನೆರವು ದೊರಕಿದ್ದು, ಕೆಲ ಶಿಕ್ಷಕರು, ದಾನಿಗಳು ಸೇರಿ ವಿದ್ಯಾರ್ಥಿನಿ ಖಾತೆಗೆ ೯೪ ಸಾವಿರ ರೂ. ಜಮಾ ಆಗಿದೆ. ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಯೋಗರಾಜ ಕೆ, ಹುಲಸೂರದ ಅಧ್ಯಕ್ಷ ಸೂರ್ಯಕಾಂತ ಅಡಕೆ, ಕಾರ್ಯದರ್ಶಿಗಳಾದ ವಿಜಯಕುಮಾರ ಮಾನೆ, ಮದನಕುಮಾರ ಪಾಟೀಲ್ ಹಾಗೂ ಪದಾಧಿಕಾರಿಗಳು ಶಿಕ್ಷಕರಿಂದ ಹಣ ಸಂಗ್ರಹಿಸಿದ್ದರು.
4.76 ಲಕ್ಷ ರೂ. ಜಮಾ: ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಶಿಕ್ಷಕರಿಂದ ಸಂಗ್ರಹಿಸಿದ ೧. ೨೭ಲಕ್ಷ ರೂ, ಮರಾಠಾ ನೌಕರರ ಬಳಗದಿಂದ ೧.೭೧ ಲಕ್ಷ ರೂ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ ಮಾಲಿಪಾಟೀಲರ ಶೇಡೋಳ ಗೆಳೆಯರ ಬಳಗದಿಂದ ೩೫ ಸಾವಿರ, ಎ.ಜಿ.ಟಿ.ಶಿಕ್ಷಕರ ಸಂಘದಿAದ ೩೨೧೦೦ ರೂ, ಯೋಗರಾಜ ಅವರ ಚಿತ್ರದುರ್ಗದ ಬಿ.ಇಡಿ.ಸಹಪಾಠಿ ಬಳಗದಿಂದ ೧೧೨೦೦ರೂ, ಮುಖ್ಯೋಪಾಧ್ಯಾಯರ ಸಂಘದಿಂದ ೫ ಸಾವಿರ ರೂ, ಕಲಬುರಗಿಯ ಟೀಮ್ ಯಜ್ಞ ತಂಡದಿAದ ೨೦ ಸಾವಿರ ರೂ. ಮತ್ತು ವಿದ್ಯಾರ್ಥಿನಿ ಬ್ಯಾಂಕ್ ಖಾತೆಗೆ ೭೪ ಸಾವಿರ ರೂ. ಜಮಾ ಆಗಿದೆ. ಒಟ್ಟು ೪೭೬೧೦೨ ಸಂಗ್ರಹವಾಗಿದೆ. ಶುಲ್ಕ ಪಾವತಿಗೆ ಗ್ರಾಮಸ್ಥರು ಹಾಗೂ ಕೆಲ ಪ್ರಮುಖರು ನೆರವು ನೀಡಿದ್ದಾರೆ.