ವಿದ್ಯಾರ್ಥಿದೆಸೆಯಿಂದಲೇ ಸಿದ್ದೇಶ್‌ಯಾದವ್ ಹೋರಾಟ

CTD 5 Siddesh yadav nudinamana--05
Published on

ಚಿತ್ರದುರ್ಗ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ್ನು ಸಂಘಟಿಸಿದವರಲ್ಲಿ ಒಬ್ಬರಾಗಿದ್ದ ಸಿದ್ದೇಶ್‌ಯಾದವ್ ಅಗಲಿಕೆಯಿಂದ ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಸಿದ್ದೇಶ್‌ಯಾದವ್ ಸ್ನೇಹ ಬಳಗ ಎಸ್‌ಎಸ್‌ಕೆಎಸ್ ಸಮುದಾಯಭವನದಲ್ಲಿ ಶನಿವಾರ ಆಯೋಜಿಸಿದ್ದ ನುಡಿನಮನ ಕಾರ‌್ಯ ಕ್ರ ಮದಲ್ಲಿ ಮಾತನಾಡಿದ ಅವರು,ಸಿದ್ದೇಶ್‌ಯಾದವ್ ವಿದ್ಯಾರ್ಥಿ ದೆಸೆಯಿಂದಲೇ ಹೋರಾಟ ಮೈಗೂಡಿಸಿಕೊಂಡಿದ್ದರು.ಎಂಬತ್ತರ ದಶ ಕದಿಂದ ಎಬಿವಿಪಿ ಸಂಘಟನೆಗೆ ಶ್ರಮಿಸುತ್ತಿದ್ದರು. ಹಾಸ್ಟೆಲ್‌ಗಳು ಮತ್ತಿತರ ರಾಜ್ಯದಲ್ಲಿರುವ ನಾನಾ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಾಕಷ್ಟು ಹೋರಾಟಗಳನ್ನು ಮಾಡಿದ್ದಾರೆ ಎಂದರು.
ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ,ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರಲು ಸಿದ್ದೇಶ್‌ಯಾದವ್ ಬಹಳ ಪ್ರಯತ್ನಿಸಿದರು. ಒಬ್ಬ ಉತ್ತಮ,ಚತರು ಸಂಘಟನಾಕಾರರನ್ನು ಪಕ್ಷ ಕಳೆದುಕೊಂಡಿದೆ. ಜಿಲ್ಲೆಯಲ್ಲಿ ಯುವ ಪ್ರತಿಭೆಗಳನ್ನು ಬೆಳೆಸುವ ಕಲೆ ಅವರಲ್ಲಿತ್ತು ಎಂದರು.
ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ,ಸದ್ಗುರು ಶ್ರೀ ಕಬೀರಾನಂದಾಶ್ರಮದ ಶ್ರೀಶಿವಲಿಂಗಾನಂದ ಸ್ವಾಮೀಜಿ,ಯಾದವ ಮಹಾ ಸಂಸ್ಥಾನ ಮಠದ ಶ್ರೀ ಕೃಷ್ಣ ಯಾದವನಂದ ಸ್ವಾಮೀಜಿ,ಬೆಂಗಳೂರು ವನಕಲ್ಲು ಮಲ್ಲೇ ಶ್ವರ ಮಹಾ ಸಂಸ್ಥಾನ ಮಠದ ಶ್ರೀ ಬಸವರಮಾನಂದ ಸ್ವಾಮೀಜಿ,ಶಾಸಕರಾದ ಎಂ.ಚಂದ್ರಪ್ಪ,ಎಂಎಲ್‌ಸಿಗಳಾದ ಎನ್.ರವಿಕುಮಾರ್, ಕೆ. ಎಸ್.ನವೀನ್,ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ,ಸಾಮಾಜಿಕ ಕಾರ‌್ಯಕರ್ತ ವಾದಿ ರಾಜ್,ಗದಗ ಗ್ರಾಮೀಣ ಪಂ.ರಾಜ್‌ವಿವಿ ಕುಲಪತಿ ವಿಷ್ಣುಕಾಂತ್ ಚಟ್‌ಪಲ್ಲಿ,ಜಿಪಂ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ,ಸಂಸ್ಕಾರ ಭಾರತಿಯ ಡಾ.ರಾಜೀವಲೋಚನ,ಧರ್ಮಜಾಗರಣ ಸಮಿತಿಯ ಮುನಿಯಪ್ಪ,ಸಿದ್ದೇಶ್‌ಯಾದವ್ ಪತ್ನಿ ಶಿವಲೀಲಾಸಿದ್ದೇಶ್‌ಯಾದವ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net