

ಮೇಲುಕೋಟೆ: ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ನೀಡುವ ಸತ್ಪ್ರಜೆಗಳಾಗಿ ಬೆಳೆಯಬೇಕು ಎಂದು ಇನ್‌ಫೋಸಿಸ್ ಸ್ಟಾೃಟಿಸ್ಟಿಕ್ ಅಧಿಕಾರಿ ಹಾಗೂ ಮೇಲುಕೋಟೆ ಅಭಿವೃದ್ಧಿಯ ಮುಖ್ಯಸ್ಥೆ ಪ್ರೀತಿ ಮಹದೇವ್ ಕರೆ ನೀಡಿದರು.
ಮೇಲುಕೋಟೆಯ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಇತ್ತೀಚೆಗೆ ಮಕ್ಕಳಿಗೆ ಮುಖ್ಯ ಶಿಕ್ಷಕ ಸಂತಾನರಾಮನ್ ಕೊಡುಗೆ ನೀಡಿದ ಉಚಿತ ಬೆಲ್ಟ್ ಮತ್ತು ಟೈಗಳನ್ನು ವಿತರಿಸಿ ಮಾತನಾಡಿದರು.
ಖ್ಯಾತನಾಮರು ವ್ಯಾಸಂಗ ಮಾಡಿದ ಶತಮಾನದ ಪಾರಂಪರಿಕ ಸರ್ಕಾರಿ ಶಾಲೆಯಲ್ಲಿ ನೀವೆಲ್ಲ ವ್ಯಾಸಂಗ ಮಾಡುತ್ತಿರುವುದು ಸೌಭಾಗ್ಯ. ನಿಮ್ಮ ಬೆನ್ನೆಲುಬಾಗಿ ನಿಂತು ಶಾಲೆಯ ಬಲವರ್ಧನೆಗೆ ಶ್ರಮಿಸುತ್ತೇನೆ ಎಂದರು.
ರೈತ ಸಂಘದ ಹಿರಿಯ ಮುಖಂಡ ನ್ಯಾಮನಹಳ್ಳಿ ಶಿವರಾಮೇಗೌಡ, ತಾಲೂಕು ಉಪಾಧ್ಯಕ್ಷ ಈಶ ಮುರಳಿ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಜಯಲಕ್ಷ್ಮೀ, ಸಾಮಾಜಿಕ ಹೋರಾಟಗಾರ ಕೆ.ಎನ್. ಸುಬ್ರಹ್ಮಣ್ಯ, ಮುಖ್ಯಶಿಕ್ಷಕ ಎಸ್.ಎನ್.ಸಂತಾನರಾಮನ್, ಶಿಕ್ಷಕಿಯರಾದ ಮಹಾಲಕ್ಷ್ಮೀ, ಸೌಮ್ಯ ಚಂದನ, ಶಿಲ್ಪ ಇತರರಿದ್ದರು.