ವಿದ್ಯಾರ್ಥಿಗಳು ಹಿರಿಯರ ಆದರ್ಶ ಪಾಲಿಸಬೇಕು : ಸುಶೀಲಾ ಕೋಟಿ

2
Published on

ಗದಗ: ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿಯೇ ಹಿರಿಯರ ಅನುಭವಿಕರ ನುಡಿಗಳನ್ನು ಶರಣರ ವಚನಗಳನ್ನು ಓದಿ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯಬೇಕೆಂದು ಚಿಂತಕಿ ಸುಶೀಲಾ ಕೋಟಿ ಹೇಳಿದರು.
ಅವರು ಶುಕ್ರವಾರ ಗದಗ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ನಗರದ ಸರ್ಕಾರಿ ಶಾಲೆ ನಂ. ೧೦ ರಲ್ಲಿ ನಡೆದ ಅಮೃತ ಭೋಜನ ಜ್ಞಾನಸಿಂಚನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.
ಓದುವ ಹವ್ಯಾಸ ರೂಢಿಸಿಕೊಳ್ಳಿ ವಚನಗಳಲ್ಲಿಯ ತಿಳುವಳಿಕೆಗಳನ್ನು ಓದಿ, ಅರ್ಥೈಯಿಸಿಕೊಂಡು ಉತ್ತಮ ಮಕ್ಕಳಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಬಿಆರ್‌ಪಿ ಪ್ರಕಾಶ ಮಂಗಳೂರು ಮಾತನಾಡಿ ಕದಳಿಶ್ರೀ ವೇದಿಕೆಯಿಂದ ಸರಕಾರಿ ಶಾಲೆಗಳಲ್ಲಿ ಶ್ರಾವಣ ಮಾಸದಾದ್ಯಂತ ಹಮ್ಮಿಕೊಳ್ಳುವ ಅಮೃತಭೋಜನ ಜ್ಞಾನಸಿಂಚನ ಕಾರ್ಯಕ್ರಮವು ವಿಶಿಷ್ಠವಾಗಿದ್ದು ವೇದಿಕೆಯ ಮಹಿಳಾ ಸದಸ್ಯನೀಯರು ಸರಕಾರಿ ಶಾಲೆಗಳಿಗೆ ಆಗಮಿಸಿ ಮಕ್ಕಳಿಗೆ ಸಿಹಿಭೋಜನದೊಂದಿಗೆ ಕಲಿಕಾ ಸಾಮಗ್ರಿ ವಿತರಿಸಿ ಜ್ಞಾನವನ್ನು ಬಿತ್ತು ವಚನ ಸಾಹಿತ್ಯವನ್ನು ತಿಳಿಸಿ ಹೇಳುವ ಕಾರ್ಯ ಪ್ರತಿ ವರ್ಷ ನಡೆಯುತ್ತಿರುವ ಅಭಿನಂದನೀಯ ಎಂದರು.
ಕದಳಿಶ್ರೀ ವೇದಿಕೆಯಿಂದ ಶರಣ ಸಂಸ್ಕೃತಿಯ ಚಿಂತಕರಾದ ಸುಮಾ ಪಾಟೀಲ, ಸಾಗರಿಕಾ ಅಕ್ಕಿ, ಹೇಮಾ ಪೊಂಗಾಲಿಯಾ ಹಾಗೂ ಗದಗ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಮನ್ವಯ ಅಧಿಕಾರಿ ಎಸ್.ಪಿ.ಪ್ರಭಯ್ಯನಮಠ ಹಾಗೂ ಶರಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಮನ್ವಯ ಅಧಿಕಾರಿ ಎಸ್.ಪಿ.ಪ್ರಭಯ್ಯನಮಠ ಮಾತನಾಡಿ ಬಾಲ್ಯದಲ್ಲಿ ಉತ್ತಮ ಸಂಸ್ಕಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಸುಖಮಯವಾಗುವದು ಎಂದರು.
ಡಾ.ರಾಧಿಕಾ ಕುಲಕರ್ಣಿ ಅವರು ಕೊಡಮಾಡಿದ ಅಂಗವಿಕಲ ಮಕ್ಕಳ ಕಿಟ್‌ನ್ನು ಹಾಗೂ ದಾನಿಗಳು ಕೊಡಮಾಡಿದ ಶಾಲಾ ಮಕ್ಕಳ ಕುರ್ಚಿ, ಟೇಬಲ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಶಿಕ್ಷಕಿಯರಾದ ಶ್ರೀಮತಿ ಜಿ.ಎಸ್.ಜತ್ತಿ ಹಾಗೂ ಎಸ್.ಆರ್.ಕುಲಕರ್ಣಿ ವಚನ ಪ್ರಾರ್ಥನೆಗೈದರು, ಸಂಪನ್ಮೂಲ ವ್ಯಕ್ತಿಗಳಾದ ರವಿ ಹೆಬ್ಬಳಿ ಸ್ವಾಗತಿಸಿದರು, ವ್ಹಿ.ಟಿ.ದಾಸರಿ ಪರಿಚಯಿಸಿದರು, ಕೆ.ಎಸ್.ಬೇಲೇರಿ ನಿರೂಪಿಸಿದರು ಕೊನೆಯಲ್ಲಿ ಮುಖ್ಯೋಪಾಧ್ಯಾಯ ಎಫ್.ಎ.ನಮಾಜಿ ವಂದಿಸಿದರು.
ಕಾರ್ಯಕ್ರಮದಲ್ಲಿ ಎಲ್.ಎಂ.ಗುಜ್ಜಾಯಿ, ಎ.ಎಸ್.ಸಿಂಗಟಾಲಕೇರಿ, ಎಸ್.ಎಸ್.ಗುತ್ತಿ, ಎನ್.ಎಸ್.ಕೋಟ್ನೇಕಲ್ಲ, ಡಿ.ಡಿ.ಹಳ್ಯಾಳ ಉಪಸ್ಥಿತರಿದ್ದರು.
= = =
ಫೋಟೋ ಇದೆ : ಕದಳಿಶ್ರೀ ವೇದಿಕೆ-೨
= = =
ಸುದ್ದಿ ಪ್ರಕಟಣೆ ಕೃಪೆಗೆ/ ಎಫ್.ಎ.ನಮಾಜಿ, ಮುಖ್ಯೋಪಾಧ್ಯಾಯನಿ.
= = =

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net