ವಿದ್ಯಾರ್ಥಿಗಳು ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯಿರಿ

27rajesh10
Published on

ಚಾಮರಾಜನಗರ: ಬಾಲಕರು ಮತ್ತು ಬಾಲಕಿಯರು ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿ ಪಡೆಯಬೇಕು ಎಂದು ನಾಗ ಮಾರ್ಷಲ್ ಆರ್ಟ್ಸ್ ಅಕಾಡಮಿ ಅಧ್ಯಕ್ಷ ಎಂ.ಸಿದ್ದರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಮರ್ಸಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಲರ್ ಬೆಲ್ಟ್ ತರಬೇತಿದಾರರಿಗೆ ಬೆಲ್ಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿನಿಯರು ತಮ್ಮ ಉನ್ನತ ಶಿಕ್ಷಕಣದ ಜತೆಗೆ ಇತರೆ ಆರೋಗ್ಯಕರ ಚಟುವಟಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಇತ್ತೀಚಿನ ಪರಿಸ್ಥಿತಿಯಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕರಾಟೆ ತರಬೇತಿ ಅತ್ಯಂತ ಸಹಕಾರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಾಲೆ ಆಡಳಿತ ಮಂಡಳಿಯ ಅಧ್ಯಕ್ಷ ಮುಜಾಹಿದ್ ಅಹ್ಮದ್, ಕಾರ್ಯದರ್ಶಿ ಸಿದ್ದಿಕ್ ಅಹ್ಮದ್, ಡಾ.ಮಹೇಶ್, ಗಣಿಉದ್ಯಮಿ ಫೈಸಲ್ ಉಲ್ಲಾಶರ್ೀ, ನಗರ ಸಭೆ ಸದಸ್ಯ ಖಲೀಲ್ ಹುಲ್ಲಾ, ಅಬ್ದುಲ್ ಫೈಸಲ್, ಸೈಯದ್ ಮುಜಮ್ಮಿಲ್, ಇದ್ರೀಸ್ ಖಾನ್, ಮಹಮ್ಮದ್ ಜಾವೀದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net