

ಸವಣೂರ: ವಿದ್ಯಾರ್ಥಿ ಜೀವನದಲ್ಲಿ ಸ್ವಚ್ಛತೆ ಅರಿವು ಹೊಂದುವ ಪ್ರತಿಯೊಬ್ಬರು ವಯಸ್ಸಿನ ಭೇದ ಭಾವ ಹೊಂದದೇ ಸ್ವಚ್ಛತೆ ರಾಯಭಾರಿಯಾಗಲು ಸಾಧ್ಯವಾಗಲಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ನರಹರಿ ನಾಯಕ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸವಣೂರ, ಅಮೂಲ್ಯ ಆಥಿರ್ಕ ಸಾಕ್ಷರತಾ ಕೇಂದ್ರ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಆಥಿರ್ಕ ಸಾಕ್ಷರತೆ ಹಾಗೂ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ವಚ್ಛತೆಯ ರಾಯಭಾರಿಗಳಾಗಲಿ ಸ್ವಚ್ಛತೆ ಕಾಪಾಡಿದಲ್ಲಿ ಮಾತ್ರ ಸ್ವಸ್ಥ ಸಮಾಜ ನಿಮಾರ್ಣ ಸಾಧ್ಯವಾಗಲಿದೆ. ಪ್ರತಿಯೊಬ್ಬರು ಬ್ಯಾಂಕಿನ ವ್ಯವಹಾರ ಕುರಿತು ಜಾಗೃತಿ ಹೊಂದಿದಲ್ಲಿ ಉಳಿತಾಯದೊಂದಿಗೆ ಉತ್ತಮ ಜೀವನ ನಿರ್ವಹಣೆಗೆ ಮುಂದಾಗಬಹುದಾಗಿದೆ ಎಂದರು.
ಅಮೂಲ್ಯ ಆಥಿರ್ಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಹರೀಶ ಹಿರಳ್ಳಿ ಅವರು ಸ್ವಭಾವ ಸ್ವಚ್ಛತೆ, ಸಂಸ್ಕಾರ ಸ್ವಚ್ಛತೆ ಕುರಿತು ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಜೀವನ್ ಸುರಕ್ಷಾ ಭೀಮಾ ಯೋಜನೆ ಕುರಿತು ವಿವರಿಸಿದರು.
ಮುಖ್ಯ ಶಿಕಿ ಸೋಫಿಯಾ ನದಾಫ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾಥಿರ್ನಿಯರು ಸ್ವಚ್ಛತೆ ಅರಿವು ಹಾಗೂ ಆಥಿರ್ಕ ಸಾಕ್ಷರತೆ ಅರಿವು ಕುರಿತು ಕಿರು ನಾಟಕ ಪ್ರದಶಿರ್ಸಿದರು. ಕೆವಿಜಿ ಬ್ಯಾಂಕ್ನ ಸಹಾಯಕ ವ್ಯವಸ್ಥಾಪಕ ಉದಯಕುಮಾರ, ಶಿಕ್ಷಕರಾದ ಸೌಭಾಗ್ಯವತಿ ಬಾಕಿರ್, ಶೋಭಾ ಭಜಂತ್ರಿ ಹಾಗೂ ಇತರರಿದ್ದರು.