ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಪಾಲನೆ ಮಾಡಲಿ

21-06-25--krs1 (1)
Published on

ಕೆ.ಆರ್.ಸಾಗರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕೆ.ಆರ್.ಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಶುಕ್ರವಾರ ಸಸ್ಯ ಸಮೃದ್ಧಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಾಧಿಶರಾದ ಅರಳಿ ನಾಗರಾಜು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪಾಲಕರು ಜೊತೆಗೂಡಿ ಸಸಿ ನೆಟ್ಟು ನೀರು ಹಾಕಿದರು.

ಬಳಿಕ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ತಮ್ಮ ಮನೆಯ ಪರಿಸರ ಸೇರಿದಂತೆ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಟ್ಟು ಪಾಲನೆ ಮಾಡಬೇಕು. ಪರಿಸರದ ಕಾಳಜಿ ನಮ್ಮ ಜೀವನದ ಒಂದು ಅಂಗವಾಗಿದೆ ಎಂಬದಾಗಿ ತಿಳಿಯಬೇಕು ಎಂದರು.

ಕಾಲೇಜು ಅಭಿವೃದ್ಧಿ ಅಧ್ಯಕ್ಷ ಎಂ.ಬಿ.ಕುಮಾರ್, ವಕೀಲ ಮಂಡ್ಯ ಗುರುಪ್ರಸಾದ್, ಪರಿಸರ ಪ್ರೇಮಿ ಲವಕುಮಾರ್, ಪ್ರಾಂಶುಪಾಲ ಲಿಂಗರಾಜು, ಜಯಲಕ್ಷ್ಮೀ, ಮುಖ್ಯ ಅತಿಥಿ ನಿವೃತ್ತ ಶಿಕ್ಷಕ ರಾಮಪ್ರಸಾದ ಪೊನ್ನಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net