ವಿದ್ಯಾರ್ಥಿಗಳು ಸಮಯ ಸದ್ಬಳಕೆ ಮಾಡಲಿ

Students, good use of time, Hitnalli, former MLA, Dr. Devananda Chavan,
ಹಿಟ್ನಳ್ಳಿ ತಾಂಡಾದ ಜಗದಂಬಾ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ ಉದ್ಘಾಟಿಸಿದರು. ಶಶಿಕಾಂತ ಪತಂಗಿ, ರಾಚೋಟೇಶ್ವರ ಶಿವಾಚಾರ್ಯರು, ಜಿ.ಬಿ ಅಂಗಡಿ, ಕಸ್ತೂರಿಬಾಯಿ ದೊಡಮನಿ, ರತ್ನವ್ವ ಮಾದರ ಇತರರಿದ್ದರು.
Published on

ಹಿಟ್ನಳ್ಳಿ: ಶಿಲ್ಪಿ ಕಲ್ಲನ್ನು ಮೂರ್ತಿಯನ್ನಾಗಿ ಮಾಡುವಂತೆ ಶಿಕ್ಷಕರು ಮಕ್ಕಳ ಮನಸ್ಸನ್ನು ತಿದ್ದಿ ತಿದ್ದಿ ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸುವ ಕಾರ್ಯ ಸದಾ ಸ್ಮರಣೀಯ ಎಂದು ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.

ದೇವರಹಿಪ್ಪರಗಿ ತಾಲೂಕಿನ ಹಿಟ್ನಳ್ಳಿ ತಾಂಡಾದ ಜಗದಂಬಾ ವಿದ್ಯಾವರ್ಧಕ ಸಂಘದ ೂಲಸಿಂಗ ನಾರಾಯಣ ಚವ್ಹಾಣ ಶಿಕ್ಷಣ ಮಹಾವಿದ್ಯಾಲಯ, ಜಗದಂಬಾ ಪ್ರಥಮ ದರ್ಜೆ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಜಗದಂಬಾ ಸ್ವತಂತ್ರ ಪದವಿ ಪೂರ್ವ ಕಾಲೇಜು, ಜಗದಂಬಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಸಿಕ್ಕ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಜತೆಗೆ ಸಕಾರಾತ್ಮಕ ಚಿಂತನೆ ಮಾಡಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ತಾಳ್ಮೆ, ಶ್ರದ್ಧೆಯಿಂದ ಓದುವುದು ಅವಶ್ಯ ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಶಿಕಾಂತ ಪತಂಗಿ ಮಾತನಾಡಿ, ಶಿಕ್ಷಕರು ಮಕ್ಕಳ ಅಂತರಂಗದ ಜ್ಞಾನದ ದೀಪವನ್ನು ಬೆಳಗಿಸುವ ಕಾಯ ಮಾಡುವ ಮಹಾನ್ ಶಿಲ್ಪಕಾರರು ಎಂದರು.

ಡಿಡಿಪಿಯು ಬಿ.ಟಿ.ಗೊಂಗಡಿ ಮಾತನಾಡಿ, ಜೀವನದಲ್ಲಿ ಸಾಧನೆಗೆ ಸದಾ ಕ್ರಿಯಾಶೀಲವಾಗಿರಬೇಕು. ಮಕ್ಕಳ ಮನಸ್ಸು ಬಿಳಿ ಹಾಳೆಯಾಗಿದೆ. ಅದರ ಮೇಲೆ ಉತ್ತಮ ಚಿತ್ರ ರಚನೆಯಾಗುವಂತೆ ಎಲ್ಲರೂ ಶ್ರಮಿಸುವುದು ಅಗತ್ಯವಾಗಿದೆ ಎಂದರು.

ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಮಾತನಾಡಿ, ಶಿಕ್ಷಕರಿಗೆ ಸಹನಾ ಮನೋಭಾವ ಅಗತ್ಯ. ಮಕ್ಕಳೊಂದಿಗೆ ಬೆರೆತು ಪಾಠ ಮಾಡಿದಾಗ ಮಾತ್ರ ಗುರು ಶಿಷ್ಯರ ಸಂಬಂಧ ಗಟ್ಟಿಯಾಗುತ್ತದೆ ಎಂದರು.

ನಾಗರಾಜ ವಕ್ಕಲದಿನ್ನಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರು, ಮುಖ್ಯಗುರುಗಳು, ಕಚೇರಿ ಅಧೀಕ್ಷಕರು, ಕಾವಲುಗಾರರು, ದ್ವಿತೀಯ ದರ್ಜೆ ಸಹಾಯಕರು, 25 ನಿವೃತ್ತ ಶಿಕ್ಷಕರು ಹಾಗೂ ರಾಷ್ಟ್ರಮಟ್ಟದ ಫುಟ್‌ಬಾಲ್ ಹಾಗೂ ಖೋಖೋ ಪಂದ್ಯಾವಳಿಗೆ ಆಯ್ಕೆಯಾದ ವಿದ್ಯಾರ್ಥಿ- ವಿದ್ಯಾರ್ಥಿಯರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಎನ್‌ಎಸ್‌ಎಸ್‌ನಿಂದ ರಕ್ತದಾನ ಶಿಬಿರ ನಡೆಯಿತು.

ಸಂಘದ ಅಧ್ಯಕ್ಷ ಜಿ.ಬಿ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ತಾಂಬಾದ ಜಗದಂಬಾ ವಿ.ವ ಸಂಘದ ಕಾರ್ಯದರ್ಶಿ ರವಿಕುಮಾರ ಚವ್ಹಾಣ, ಉಪಾಧ್ಯಕ್ಷೆ ಕಸ್ತೂರಿಬಾಯಿ ದೊಡಮನಿ, ವಿಶೇಷ ಉಪನ್ಯಾಸಕ ಪ್ರೊ.ಮಹಾದೇವ ರೆಬಿನಾಳ, ಗ್ರಾಪಂ ಅಧ್ಯಕ್ಷ ರತ್ನವ್ವ ಮಾದರ, ಸೀತಾರಾಮ ರಾಠೋಡ, ಶಾಂತಾಬಾಯಿ ರಾಠೋಡ, ಪ್ರಶಾಂತ ರಾಠೋಡ, ದಯಾನಂದ ನಾಯಕ, ಪ್ರಾಚಾರ್ಯ ಬಿ.ಎ್.ತಳವಾರ, ಮುಖ್ಯಶಿಕ್ಷಕರಾದ ಪಿ.ಎಚ್.ಜಂಗಮಶೆಟ್ಟಿ, ಪಿ.ಎನ್. ಅಂಗಡಿ ಇತರರಿದ್ದರು.

ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಮನೋರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಎಸ್.ಪಿ.ಮಸಳಿ ಸ್ವಾಗತಿಸಿದರು. ಎನ್.ಪಿ. ಕೋಟಿ ನಿರೂಪಿಸಿದರು. ಎಸ್.ಚಟ್ಟರಕಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net