ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಲಿ

3Manju4
ಬೆಳಗಾವಿ ನಗರದ ರಾಜಾಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಮಾಂಡರ್ ದೀಪಕ ಬಾಲ್ರಾ ಪುರಸ್ಕಾರ ನೀಡಿದರು. ವಿಶ್ವನಾಥ ಸಿ. ಕಾಮಗೋಳ, ಲಿಂಗೌಡ ವಿ.ದೇಸಾಯಿ, ಎಸ್.ಜಿ. ನಂಜಪ್ಪನವರ ಇತರರಿದ್ದರು.
Published on

ಬೆಳಗಾವಿ: ವಿದ್ಯಾರ್ಥಿಗಳು ಎಲ್ಲ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬೆಳಗಾವಿ ಎನ್‌ಸಿಸಿ ವಾಯುದಳ ವಿಭಾಗದ ಕಮಾಡಿಂಗ್ ಅಧಿಕಾರಿ ದೀಪಕ ಬಾಲ್ರಾ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ರಾಜಾಲಖಮಗೌಡ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಈಚೆಗೆ ಜರುಗಿದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ನಿರಂತರ ಅಧ್ಯಯನದಿಂದ ಜ್ಞಾನವೃದ್ಧಿಯಾಗಲು ಸಾಧ್ಯ. ಶಿಕ್ಷಕರ ಮಾರ್ಗದರ್ಶನದಲ್ಲಿ ಅಭ್ಯಸಿಸಿದರೆ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು. ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಲಿಂಗೌಡ ವಿ.ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ಅಭ್ಯಾಸದ ಕಡೆ ಗಮನ ಕೊಡಬೇಕು. ಭವಿಷ್ಯದ ಬಗ್ಗೆ ಒಳ್ಳೆಯ ನಿರ್ಣಯ ತೆಗೆದುಕೊಳ್ಳಬೇಕು. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದರು. ಕೆಎಲ್‌ಇ ಸಂಸ್ಥೆಯ ಆಜೀವ ಸದಸ್ಯಎಸ್.ಜಿ. ನಂಜಪ್ಪನವರ, ಉಪ-ಪ್ರಾಚಾರ್ಯ ಡಾ. ಎಸ್.ಎ. ಜವಳಿ, ಪ್ರಾಚಾರ್ಯ ವಿಶ್ವನಾಥ ಸಿ. ಕಾಮಗೋಳ, ಎಂ.ಎಲ್. ಪಾಟೀಲ, ಆರ್.ವಿ. ಗುಡಿ, ಅನಿಲ ಕಣಗಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net