

ಚಿತ್ರದುರ್ಗ: ಕಾನೂನು ಅರಿವಿನಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಮುರುಘಾಮಠದ ಉಸ್ತುವಾರಿ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆಎಂ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಕಾನೂನು ಪದವಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರಿಚಕಾ ರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವ ಹಾಗೂ ಆಸ್ತಿ ರಕ್ಷಣೆಗೆ ಕಾನೂನಿನ ಅರಿವು ಅಗತ್ಯವಿದೆ. ಸರ್ಕಾರದ ಸೌಲಭ್ಯಗಳ ನ್ನು ಪಡೆಯಲು ಈ ಜ್ಞಾನ ನೆರವಾಗಲಿದೆ. ವಿದ್ಯಾರ್ಥಿಗಳು ಶಿಸ್ತುಬದ್ಧ್ದ ಜೀವನ,ಏಕಾಗ್ರತೆಯಿಂದ ಅಧ್ಯಯನವನ್ನು ರೂಢಿಸಿಕೊಂಡರೆ ತಾ ನು ಓದಿದ ಶಿಕ್ಷಣ ಸಂಸ್ಥೆ, ಪಾಲಕರಿಗೆ ಕೀರ್ತಿ ತರಬಹುದಾಗಿದೆ ಎಂದರು.
ಎಸ್‌ಜೆಎಂ ಕಲಾ, ವಿಜ್ಞಾನ, ವಾಣಿಜ್ಯ ಕಾಲೇಜು ಪ್ರಾಂಶುಪಾಲ ಎಚ್.ಎಸ್.ಡಾ.ಪಂಚಾಕ್ಷರಿ ಮಾತನಾಡಿ,ಪಠ್ಯದ ಜತೆಗೆ ವಿದ್ಯಾರ್ಥಿ ಗಳು ಆಟೋಟ,ಸಾಂಸ್ಕೃತಿಕ ಕಾರ‌್ಯಕ್ರಮ,ಎನ್‌ಎಸ್‌ಎಸ್‌ನಂಥ ಚಟುವಟಿಕೆಗಳಡೆ ಆಸಕ್ತಿ ಬೆಳೆಸಿಕೊಳ್ಳಬೇಕು. ಶಿಕ್ಷಕರು,ಪಾಲಕರು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸ ಬೇಕೆಂದರು.
ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಕಾನೂನು ಪದವೀಧರರು, ವಕೀಲರಾಗಿ ಸ್ವಾವಲಂಬಿ ಜೀವನ ನಡೆಸಬಹುದು. ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರ ಅನುದಾನದಲ್ಲಿ ಕಾಲೇಜಿನ 3 ಕೊಠಡಿಗಳಿಗೆ 10 ಲಕ್ಷ ರೂ.ಅನುದಾನ ಕೊಡಿಸುವುದಾಗಿ ಭರವಸೆ ನೀ ಡಿದರು.
ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ದಿನೇಶ್ ಮಾತನಾಡಿ, ಇಲ್ಲಿ ಶಿಕ್ಷಣ ಪಡೆದ ಇಬ್ಬರು ಕಾನೂನು ಪದವೀಧರರು, ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದಾರೆ. ಎಂಟು ಪದವೀಧರರು ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈವರೆಗೆ ಕಾಲೇಜಿನ 25 ವಿದ್ಯಾರ್ಥಿಗಳು ವಿವಿಧ ರ‌್ಯಾಂಕ್‌ಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ ಎಂದರು.