ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಶಲ್ಯವಂತರೂ ಆಗಿ

24 ckm 1
ಚಿಕ್ಕಮಗಳೂರು ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ಎಐಟಿ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ ಉದ್ಘಾಟಿಸಿದರು. ಎಸ್.ಶಾಂತಕುಮಾರಿ, ಎಸ್.ಆರ್.ಹೇಮಾ, ಕುಮುದಾ ಎಂ.ಕಿಣಿ, ಡಾ. ಶಿವಮೂರ್ತಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ವಿದ್ಯಾರ್ಥಿಗಳು ಸರ್ವಾಂಗೀಣವಾಗಿ ಬೆಳೆಯಬೇಕಾದರೆ ಶಿಕ್ಷಣವಂತರಾಗುವುದರ ಜೊತೆಗೆ ಕೌಶಲ್ಯವಂತರೂ ಆಗಬೇಕು ಎಂದು ಎಐಟಿ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ ಸಲಹೆ ನೀಡಿದರು.

ನಗರದ ಸಂಜೀವಿನಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನಲ್ಲಿಂದು ವಿಜ್ಞಾನ ಮತ್ತು ತಂತ್ರಜ್ಞಾನ ಅವ್ಯಾಹತವಾಗಿ ಬೆಳೆಯುತ್ತಿದೆ. ಪ್ರತಿದಿನ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಅದರಿಂದಾಗಿ ಜಗತ್ತು ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ, ಹಿಂದೆ ಸೈನಿಕರು ಸೈನಿಕರ ನಡುವೆ ಯುದ್ಧವಾಗುತ್ತಿತ್ತು. ಆದರೆ ಈಗ ತಂತ್ರಜ್ಞಾನದೊAದಿಗೆ ಯುದ್ಧಗಳು ನಡೆಯುತ್ತಿವೆ ಎಂದರು.

ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿಜ್ಞಾನ ತಂತ್ರಜ್ಞಾನದ ಯುಗದಲ್ಲಿ ಬೆಳೆದು ಯಶಸ್ವಿಯಾಗಬೇಕಾದರೆ ಬರಿ ವಿದ್ಯೆ ಕಲಿತರಷ್ಟೇ ಸಾಲದು. ಕೌಶಲ್ಯತೆಯನ್ನೂ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಲು ವಿದ್ಯಾರ್ಥಿ ಸಂಘಗಳು ಸಹಕಾರಿ. ವಿದ್ಯಾರ್ಥಿ ಸಂಘಗಳ ಪದಾಧಿಕಾರಿಗಳು ತಾವು ಬೆಳೆಯುವುದರ ಜೊತೆಗೆ ತಮ್ಮ ಶಾಲೆಯನ್ನೂ ಬೆಳೆಸಬೇಕು ಎಂದು ಕರೆನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷೆ ಎಸ್.ಶಾಂತಕುಮಾರಿ, ಸಂಜೀವಿನಿ ವಿದ್ಯಾ ಸಂಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಅವರಲ್ಲಿ ಸಂಸ್ಕÈತಿ, ಸಂಸ್ಕಾರವನ್ನೂ ಬೆಳೆಸುತ್ತಿದೆ. ಈ ಮೂಲಕ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಪಾಲಕರು ತಮ್ಮ ಮಕ್ಕಳನ್ನು ಬರೀ ವಿದ್ಯಾವಂತರನ್ನಾಗಿ ಮಾಡಿದರೆ ಸಾಲದು. ಅವರನ್ನು ಸಂಸ್ಕಾರವAತರನ್ನಾಗಿಯೂ ಮಾಡಬೇಕು. ಅವರಿಗೆ ನಮ್ಮ ಸಂಸ್ಕÈತಿ, ಸಂಪ್ರದಾಯ, ಸಂಸ್ಕಾರವನ್ನೂ ಕಲಿಸಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯೆ ಎಸ್.ಆರ್.ಹೇಮಾ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಸಂಜೀವಿನಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಪಿ. ಉಡುಪ, ಮುಖ್ಯ ಶಿಕ್ಷಕಿ ಕುಮುದಾ ಎಂ. ಕಿಣಿ, ಡಾ. ಶಿವಮೂರ್ತಿ, ಸಹ ಶಿಕ್ಷಕಿ ಇಂದಿರಾ, ವಿದ್ಯಾರ್ಥಿಗಳಾದ ಧಾತ್ರಿ, ಅದ್ರಿತಾ, ಧನ್ಯಶ್ರೀ, ಅಕ್ಷರ ಎಸ್. ಗೌಡ, ಸಿ.ಎ.ವರಲಕ್ಷ್ಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net