ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನ ಬೆಳೆಸಿಕೊಳ್ಳಲಿ

jkd 3-1
ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಪುಷ್ಪಾತಾಯಿ ಶಾಲೆಯಲ್ಲಿ ನಡೆದ ಪ್ರಭು ಅವಾರ್ಡ್ಸ್ ಕಾರ್ಯಕ್ರಮವನ್ನು ಶಾಸಕ ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಡಾ. ವಿಶ್ವಪ್ರಭುದೇವ ಶಿವಾಚಾರ್ಯರು, ಸಂಸ್ಥೆ ಆಡಳಿತಾಧಿಕಾರ ಪ್ರೊ. ವೈ.ಬಿ. ಹೊಟ್ಟಿ ಇತರರಿದ್ದರು.
Published on

ಜಮಖಂಡಿ: ಸ್ಪರ್ಧಾತ್ಮಕ ಯುಗದಲ್ಲಿ ಇಂದಿನ ವಿದ್ಯಾರ್ಥಿಗಳು, ವಿಜ್ಞಾನ ತಂತ್ರಜ್ಞಾನಗಳಗಳನ್ನು ಬೆಳೆಸಿಕೊಳ್ಳುವ ಜತೆಗೆ ವಿದೇಶಗಳ ಜತೆ ವ್ಯವಹಾರ ಬೆಳೆಸಿಕೊಳ್ಳುವ ಕೌಶಲ ಹೊಂದಬೇಕು ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.

ತಾಲೂಕಿನ ಸಿದ್ದಾಪುರ ಗ್ರಾಮದ ಪುಷ್ಪಾತಾಯಿ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆ ಹಾಗೂ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಶುಕ್ರವಾರ ನಡೆದ ಪ್ರಭು ಅವಾರ್ಡ್ಸ್ 2024-25 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಈಗ ಜನಸಂಖ್ಯೆ ಸ್ಫೋಟ ಆಗ್ತಿದೆ. ಸದ್ಯ 140 ಕೋಟಿ ಜನಸಂಖ್ಯೆ ಇದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಗುಣಾತ್ಮಕ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು, ವಿದೇಶಗಳಿಂದ ಆಮದು ಮಾಡಿಕೊಳ್ಳುವುದಕ್ಕಿಂತ ಇಲ್ಲಿಯೇ ವಿದೇಶಗಳಿಗೆ ಬೇಕಾದ ವಸ್ತುಗಳನ್ನು ಕಡಿಮೆ ದರದಲ್ಲಿ ತಯಾರಿಸಿ ಕಳುಹಿಸುವ ಕೌಶಲ ಬೆಳೆಸಿಕೊಂಡಿದ್ದೆಯಾದರೆ ಅವರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದರು.

ಕೊಣ್ಣೂರ ಕಲ್ಯಾಣ ಹೊರಗಿನಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ವಿದ್ಯೆಯನ್ನು ಯಾರೂ ಕಳ್ಳತನ ಮಾಡಲು ಬರುವುದಿಲ್ಲ. ವಿದ್ಯೆಗೆ ಟ್ಯಾಕ್ಸ್ ಇಲ್ಲ, ವಿದ್ಯೆಯನ್ನು ಅಣ್ಣತಮ್ಮಂದಿರಿಗೆ ಪಾಲು ಮಾಡಲೂ ಬರಲ್ಲ. ವಿದ್ಯೆಯಿದ್ದರೆ ಜಿವನದಲ್ಲಿ ಏನನ್ನಾದರೂ ಸಾಧನೆ ಮಾಡಲು ಸಾಧ್ಯ ಎಂದರು.

ಸಂಸ್ಥೆ ಆಡಳಿತಾಧಿಕಾರ ಪ್ರೊ. ವೈ.ಬಿ. ಹೊಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಧರ್ಮಲಿಂಗಯ್ಯ ಗುಡಗುಂಟಿ, ಪಾರ್ವತಿ ಗುಡಗುಂಟಿ, ನಾಗಪ್ಪ ಸನದಿ, ದೇವಲ ದೇಸಾಯಿ, ಡಾ.ಎಸ್.ಎಸ್. ಹೂಲಿ, ಕೆ.ವೈ. ಭೂತಾಳಿ ಇತರರಿದ್ದರು. ಎಂ.ಬಿ. ಗುಮಾಸ್ತೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net