ವಿದ್ಯಾರ್ಥಿಗಳು ರಕ್ತದಾನದಂತಹ ಸಮಾಜಮುಖಿ ಕೆಲಸದಲ್ಲಿ ಭಾಗವಹಿಸಿ: ಡಾ.ಎ. ಸಾವಿತ್ರಿ

ವಿದ್ಯಾರ್ಥಿಗಳು ರಕ್ತದಾನದಂತಹ ಸಮಾಜಮುಖಿ ಕೆಲಸದಲ್ಲಿ ಭಾಗವಹಿಸಿ: ಡಾ.ಎ. ಸಾವಿತ್ರಿ
Published on

ಹಾಸನ: ರಕ್ತದಾನದಂತಹ ಸಮಾಜಮುಖಿ ಕೆಲಸದಲ್ಲಿ ಯುವ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಇಂದಿನಿಂದಲೇ ರಕ್ತದಾನ ಮಾಡಬೇಕು ಮತ್ತು ಇಂತಹ ಸೇವಾ ಕಾರ್ಯಗಳನ್ನು ಮಾಡಲು ಮುಂದೆ ಬರಬೇಕು ಎಂದು ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕಿ ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಎ. ಸಾವಿತ್ರಿ ಕರೆ ನೀಡಿದರು.
ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ , ಯುವ ರೆಡ್ ಕ್ರಾಸ್ ಘಟಕ ಮೊಸಳೆಹೊಸಹಳ್ಳಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಸ್ವಯಂಪ್ರೇರಿತ ರಕ್ತದಾನ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ಯಾವುದೇ ಆಕರ್ಷಣೆಗೆ ಓಳಗಾಗದೆ ಶೀಸ್ತಿನ ಜೀವನ ನಡೆಸಿ ದೊಡ್ಡ ಮಟ್ಟದ ಸಾಧನೆ ಮಾಡಬಹುದು ಎಂದು ಹೇಳಿದರು.
ರೆಡ್ ಕ್ರಾಸ್ ನಿರ್ದೇಶಕ ಮತ್ತು ಕಾರ್ಲೇ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ತೇಜಸ್ವಿ ಮಾತನಾಡಿ,ವಿದ್ಯಾರ್ಥಿಗಳು ರಕ್ತದಾನ ಮಾಡಲು ಅವರು ಆರೋಗ್ಯವಂತರಾಗಿ ಸಧೃಡರಾಗಿರಬೇಕು. ಆದ್ದರಿಂದ ದಿನನಿತ್ಯ ಹೆಚ್ಚಿನ ಪೌಷ್ಠಿಕಾಂಶದ ಆಹಾರವನ್ನು ಸೇವಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ರಕ್ತದಾನ ಮಾಡಲು ಮುಂದೇ ಬಂದು ಅನೇಕ ಜೀವಗಳನ್ನು ಉಳಿಸಲು ಸಹಕರಿಸಿರುವ ನೀವುಗಳ ನಿಜ ಜೀವನದ ನಾಯಕ,ನಾಯಕಿಯರೆಂದು ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಡಾ.ವೈ.ಎಸ್.ವೀರಭದ್ರಪ್ಪನವರು ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ತಿಳಿಸಿದರು. ನಿರ್ದೇಶಕಿ ಕೆ.ಟಿ.ಜಯಶ್ರೀರವರು ರೆಡ್ ಕ್ರಾಸ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಟಿ. ರಂಗಸ್ವಾಮಿ, ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಬೀರ್ ಅಹಮದ್, ಖಜಾಂಜಿ ಜಯೇಂದ್ರ ಕುಮಾರ್, ನಿರ್ದೇಶಕರಾದ ಎಚ್.ಡಿ. ಕುಮಾರ್, ಎಲ್.ಎಸ್.ನಿರ್ಮಲ , ಡಾ. ಕಾವ್ಯಶ್ರೀ, ಸಂಚಾಲಕ ಎಚ್.ಆರ್.ಹರ್ಷಿತ್, ಕಾಲೇಜಿನ ಯುವ ರೆಡ್ ಕ್ರಾಸ್ ಸಂಚಾಲಕ ಎಂ.ಜಿ. ಗುರುಬಸವಣ್ಣ, ಮತ್ತು ಪ್ರಾಧ್ಯಪಕರು ಹಾಗೂ ಇತರರು ಉಪಸ್ಥಿತರಿದ್ದರು. ಶಿಬಿರದಲ್ಲಿ 45 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net