ವಿದ್ಯಾರ್ಥಿಗಳು ಮೌಲಿಕ ಕೊಡುಗೆ ನೀಡಲಿ

24CHIKODIGRAMEEN1 (1)
ಯಕ್ಸಂಬಾ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆಗೆ 3 ಲಕ್ಷ ರೂ. ವೆಚ್ಚದ ಶಾಲಾ ಸಾಮಗ್ರಿ ವಿತರಿಸಲಾಯಿತು. ಮಲ್ಲಿಕಾರ್ಜುನ ಹಲಕಾಟೆ, ಎಂ.ಎಸ್​. ಅಂಬಾಯಿ, ಆರ್​.ಎಸ್​.ಮಡಿವಾಳ, ಮಹಾದೇವಿ ಹಲಕಾಟೆ ಇತರರಿದ್ದರು.
Published on

ಚಿಕ್ಕೋಡಿ ಗ್ರಾಮೀಣ: ಮಕ್ಕಳು ಗುಣಮಟ್ಟದ ಶಿಣ ಪಡೆದು ಸುಭದ್ರ ರೂಪಿಸಿಕೊಳ್ಳುವ ಜತೆಗೆ ಸಮಾಜ ಮತ್ತು ದೇಶಕ್ಕೆ ಮೌಲಿಕ ಕೊಡುಗೆ ನೀಡಬೇಕು ಎಂದು ಅಕ್ವೀನ್​ ಸಿಎಸ್​ಆರ್​ ವ್ಯವಸ್ಥಾಪಕ ಮಲ್ಲಿಕಾರ್ಜುನ ಹಲಕಾಟೆ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಅಮೆರಿಕದ ಅಕ್ವೀನ್​ ಸಿಎಸ್​ಆರ್​ ಕಮಿಟಿ ಹಾಗೂ ಹಳೇ ವಿದ್ಯಾರ್ಥಿಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 3 ಲಕ್ಷ ರೂ. ವೆಚ್ಚದ ಶಾಲಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಿಕ್ಕೋಡಿ ಬಿಆರ್​ಪಿ ಎಂ.ಎಸ್​.ಅಂಬಾಯಿ, ಮುಖ್ಯಶಿಕ್ಷಕ ಆರ್​.ಎಸ್​.ಮಡಿವಾಳ, ಮಹಾದೇವಿ ಹಲಕಾಟೆ, ಶ್ರೇಯಾ ಹಲಕಾಟೆ, ಶ್ರುತಿ ಕಮತೆ, ಪೋಪಟ್​ ಕಬಾಡೆ, ರುದ್ರು ಮಗದುಮ್ಮ, ಉಮೇಶ ಸಾತ್ವರ, ಅಣ್ಣಾಸಾಹೇಬ ಹಲಕಾಟೆ, ಮಂಜುನಾಥ ಹಲಕಾಟೆ, ಎಸ್​.ಬಿ.ಹಿರೇಮಠ, ಸುರೇಖಾ ಕಬ್ಬೂರೆ, ಎಸ್​.ಕೆ.ಬಸಲಿಂಗಗೋಳ, ಸವಿತಾ ಮಸ್ತೆ, ಉದಯ ಖೋತ, ಕೃಷ್ಣ ಘಾಟಗೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net