

ಅಥಣಿ: ಗುಣಮಟ್ಟದ ಶಿಕ್ಷಣಕ್ಕೆ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಹೆಸರುವಾಸಿಯಾಗಿದೆ ಎಂದು ಇಲ್ಲಿನ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಸಿ ಸಿ.ಬಿ.ರಣಮೊಡೆ ಆಂಗ್ಲ ಮಾಧ್ಯಮ ಶಾಲೆ ಪ್ರಾಚಾರ್ಯ ಜಗದೀಶ ಹವಾಲ್ದಾರ ಹೇಳಿದರು.
ಪಟ್ಟಣದಲ್ಲಿರುವ ವಿದ್ಯಾವರ್ಧಕ ಸಂಸ್ಥೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಗುರುವಿನ ಸೇವೆ ಮಾಡಬೇಕು. ಹೆಚ್ಚು ಪರಿಶ್ರಮದಿಂದ ಓದಿ ಮೌಲ್ಯಯುತ ಬದುಕು ಕಟ್ಟಿಕೊಳ್ಳಬೇಕು. ವಿದ್ಯಾವರ್ಧಕ ಸಂಸ್ಥೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪ್ರತಿವರ್ಷ ರಾಜ್ಯಕ್ಕೆ ರ‍್ಯಾಂಕ್ ಪಡೆಯುತ್ತಿರುವುದು ಹೆಮ್ಮೆ ಎಂದರು.
ಸAಸ್ಥೆಯ ಉಪಾಧ್ಯಕ್ಷ ಪ್ರಕಾಶ ಮಹಾಜನ ಮಾತನಾಡಿ, ಜ್ಞಾನ ಮತ್ತು ಸತತ ಪ್ರರಿಶ್ರಮ ಯಶಸ್ಸಿನ ಗುಟ್ಟು. ವಿದ್ಯಾರ್ಥಿಗಳು ಮತ್ತೊಬ್ಬರಿಗೆ ಮಾದರಿಯಾಗಿ ಬದುಕಬೇಕು. ಉನ್ನತ ಅಂಕ ಗಳಿಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಮಾತನಾಡಿ, ಶಿಕ್ಷಕರ ನಿಸ್ವಾರ್ಥ ಸೇವೆ ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಸಂಸ್ಥೆ ಉನ್ನತ ಸ್ಥಾನದಲ್ಲಿದೆ. ವಿದ್ಯಾರ್ಥಿಗಳು ನಿರಂತರ ಅಭ್ಯಸಿಸುವ ಮೂಲಕ ಸಾಧನೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಜಗದೀಶ ಹವಾಲ್ದಾರ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ವಿಜಯಕುಮಾರ ಬುರ್ಲಿ, ಅಶೋಕ ಬುರ್ಲಿ, ಸುನೀಲ ಶಿವಣಗಿ, ಶ್ರೀಶೈಲ ಸಂಕ, ಓ.ಎಸ್.ಸಾವಡಕರ, ಮುಖ್ಯ ಶಿಕ್ಷಕರಾದ ಎಂ.ಎಸ್.ದೇಸಾಯಿ, ಎಂ.ಬಿ.ಬಿರಾದಾರ, ಹನುಮಂತ ಗುಡೋಡಗಿ, ಶಿಕ್ಷಕ ಬಿ.ಡಿ.ಕೋಳಿ, ಮಲ್ಲು ತೇಲಿ, ಜಿ. ಆರ್. ಐನಾಪೂರೆ, ಪೂಜಾ ನಾಯಕ, ಎಸ್.ಬಿ.ಉಪ್ಪಾರ ಇತರರಿದ್ದರು.