

ಮದ್ದೂರು: ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ ಹಾಗೂ ಅಂಬೇಡ್ಕರ್ ಸಂಕಲ್ಪದ ಸಂವಿಧಾನದ ಉದ್ದೇಶಗಳನ್ನು ಈಡೇರಿಸುವಲ್ಲಿ ಶಿಕ್ಷಣ ಸಂಸ್ಧೆಗಳು ಮತ್ತು ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.
ಶಿವಪುರದ ಧ್ವಜ ಸತ್ಯಾಗ್ರಹಸೌಧದಲ್ಲಿ ಎಚ್.ಕೆ.ವೀರಣ್ಣಗೌಡ ಕಾಲೇಜು, ತಾಲೂಕು ಆಡಳಿತ ಹಾಗೂ ಮಂಡ್ಯ ಪಿಡಿಎಫ್ ಲಯನ್ಸ್ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸ್ವಾತಂತ್ರೃ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿ ಬ್ರಿಟಿಷರ ದಾಸ್ಯದಿಂದ ಭಾರತವನ್ನು ಸ್ವಾತಂತ್ರೃಗೊಳಿಸುವಲ್ಲಿ ಗಾಂಧೀಜಿ ಸೇರಿದಂತೆ ಹಲವು ಮಹಾನ್ ನಾಯಕರ ಹೋರಾಟ ಕಾರಣವಾಗಿದ್ದು, ಇಂತಹ ಮಹಾನ್ ನಾಯಕರುಗಳ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಓದುವ ಮುಖಾಂತರ ದೇಶಾಭಿಮಾನಿಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟವು ವಿಶ್ವದ ಹೋರಾಟಗಳಿಗೆ ಮಾದರಿಯಾಗಿದ್ದು, ಅವರ ಗ್ರಾಮ ಸ್ವರಾಜ್ಯ ಸಹಕಾರಗೊಳ್ಳಬೇಕಾದರೆ ಯುವಜನತೆ ಭಾರತೀಯ ಸಂವಿಧಾನ, ಸಂಸ್ಕೃತಿಯ ಬಗ್ಗೆ ಅರಿಯಬೇಕು. ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೊಡಿಸಬೇಕು ಎಂದು ಹೇಳಿದರು.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು, ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಅಧ್ಯಕ್ಷ ಎಂ ಸ್ವರೂಪ್‌ಚಂದ್, ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಖಜಾಂಚಿ ಜಿ.ಎಸ್.ಶಿವರಾಮು, ನಿರ್ದೇಶಕ ಎಂ.ಎ.ರಾಮಲಿಂಗಯ್ಯ, ಮಂಡ್ಯ ಪಿಡಿಎಫ್ ಲಯನ್ಸ್ ಸಂಸ್ಧೆಯ ಅಧ್ಯಕ್ಷ ಸಿ.ಅನಂತ್‌ಕುಮಾರ್, ಪುರಸಭಾ ಸದಸ್ಯರಾದ ಸರ್ವಮಂಗಳಾ, ಲತಾರಾಮು, ಪ್ರಾಂಶುಪಾಲರಾದ ಜಿ.ಎಸ್.ಶಂಕರೇಗೌಡ, ಯು.ಎಸ್.ಶಿವಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ನಂದಿನಿ, ಮುಖ್ಯಶಿಕ್ಷಕರಾದ ಎನ್.ಕೃಷ್ಣ, ಹೆಚ್.ಪಿ.ಮಹೇಶ್, ಎಂ.ಟಿ.ಚಂದ್ರಶೇಖರ್, ಕೆ.ಎಂ.ವರದರಾಜು, ಆಡಳಿತಾಧಿಕಾರಿ ಯು.ಎಸ್.ರವಿ. ಹಾಗೂ ರಾಷ್ಟ್ರೀಯ ಸೇವಾ ಯೋಜನ ಅಧಿಕಾರಿಗಳಾದ ಹೆಚ್.ಎಸ್.ಪಂಚಲಿಂಗೇಗೌಡ, ಎ.ವಿ.ಪ್ರದೀಪ್ ಇತರರು ಇದ್ದರು.