

ಗೋಕಾಕ: ವಿದ್ಯಾರ್ಥಿಗಳು ಹೆಚ್ಚು ಪುಸ್ತಕ ಹಾಗೂ ದಿನಪತ್ರಿಕೆ ಓದುವ ಮೂಲಕ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡು ಪ್ರತಿಭಾನ್ವಿತರಾಗಬೇಕು ಎಂದು ರೋಟರಿ ಸಂಸ್ಥೆಯ ರಕ್ತಭಂಡಾರದ ಕಾರ್ಯದರ್ಶಿ ಸೋಮಶೇಖರ ಮಗದುಮ ಹೇಳಿದರು.
ತಾಲೂಕಿನ ಮರಡಿಮಠ ಗ್ರಾಮದ ಎಸ್ಜಿಪಿಯು ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆಯ ವಿದ್ಯಾನಿಧಿ ಯೋಜನೆಯಡಿ 60 ಪುಸ್ತಕ ಹಾಗೂ ಇನ್ನರ್ ವೀಲ್ ಸಂಸ್ಥೆಯಿಂದ ಮ್ಯಾಥಮ್ಯಾಜಿಕ್ ಗಣಿತ ವಿಷಯದ 20 ಪುಸ್ತಕಗಳನ್ನು ಶನಿವಾರ ಉಚಿತವಾಗಿ ವಿತರಿಸಿ ಮಾತನಾಡಿದರು. ರೋಟರಿ ಸಂಸ್ಥೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಸೌಲಭ್ಯ ಕಲ್ಪಿಸುತ್ತಿದೆ. ಇವುಗಳ ಸದುಪಯೋಗದಿಂದ ವಿದ್ಯಾರ್ಥಿಗಳು ಸಾಧಕರಾಗಿ. ಇಂದಿನ ಸ್ಫರ್ಧಾತ್ಮಕ ಯುಗದಲ್ಲಿ ಪ್ರತಿಭಾನ್ವಿತರಿಗೆ ಹೆಚ್ಚಿನ ಅವಕಾಶಗಳಿದ್ದು, ಗುರುಗಳ ಮಾರ್ಗದರ್ಶನ ತಂದೆ&ತಾಯಿಗಳ ಹಾಗೂ ಸಂ ಸಂಸ್ಥೆಗಳ ಸಹಕಾರದಿಂದ ಉನ್ನತ ಹುದ್ದೆ ಅಲಂಕರಿಸಿ ಬದುಕು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕಾಡಸಿದ್ಧೇಶ್ವರ ಮಠದ ಪೀಠಾಧಿಪತಿ ಡಾ.ಪವಾಡೇಶ್ವರ ಸ್ವಾಮೀಜಿ, ರೋಟರಿ ಅಧ್ಯಕ್ಷ ಡಾ.ಸಿದ್ದಣ್ಣ ಕಮತ, ಕಾರ್ಯದರ್ಶಿ ರಾಜಶೇಖರ ಮುನ್ನವಳ್ಳಿಮಠ, ರೋಟರಿ ರಕ್ತಭಂಡಾರದ ಚೇರ್ಮನ್ ಮಲ್ಲಿಕಾರ್ಜುನ ಕಲ್ಲೋಳ್ಳಿ, ನಿರ್ದೇಶಕ ಪ್ರಸಾದ ಸೊಲ್ಲಾಪುರಮಠ, ಮುಖ್ಯಶಿಕ್ಷಕಿ ರೇಖಾ ಮ್ಯಾಗೇರಿ ಇದ್ದರು.