

ಮುನವಳ್ಳಿ: ಶಿಕ್ಷಣಗೊಂದಿಗೆ ವೃತ್ತಿ ಕೌಶಲಗಳನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿಕೊಂಡು ಸಾಧನೆ ಮಾಡಬೇಕು ಎಂದು ಪ್ರಾಧ್ಯಾಪಕ ಡಾ.ರಾಜಶೇಖರ ಬಿರಾದಾರ ಹೇಳಿದರು.
ಪಟ್ಟಣದ ಜೆಎಸ್ಪಿ ಸಂದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವಾರು ಸ್ಪರ್ಧಾತ್ಮಕ ಪರೀೆಗಳನ್ನು ಎದುರಿಸಲು ನಡೆಸಬೇಕು ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಸ್. ಯಕ್ಕುಂಡಿ ಮಾತನಾಡಿ, ವಿದ್ಯಾಭ್ಯಾಸದ ನಂತರ ದೇಶ ಅಭಿವೃದ್ಧಿ ಪಥದತ್ತ ಸಾಗಿಸಲು ವಿದ್ಯಾರ್ಥಿಗಳು ಕೆಜೋಡಿಸಬೇಕು ಎಂದರು. ಸಂಸ್ಥೆಯ ಕೋಶಾಧ್ಯ ರವೀಂದ್ರ ಯಲಿಗಾರ, ಪ್ರಾಚಾರ್ಯ ಡಾ. ಎಂ.ಎಸ್. ಬಾಗೇವಾಡಿ ಮಾತನಾಡಿದರು. ನಿವತ್ತ ಮುಖ್ಯೋಪಾಧ್ಯಾಯ ಬಿ.ಬಿ.ನಾವಲಗಟ್ಟಿ. ಪ್ರಕಾಶ ಕಮಲಾಪೂರ, ಎಂ.ಎ.ಕಮತಗಿ, ಬಸವರಾಜ ತುಳಜಣ್ಣವರ, ಟಿ.ಎನ್.ಮುರಂಕರ, ವೀರೇಶ ಬೆನಚಿನಮರಡಿಮಠ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಚೇರ್ಮನ್ ಎಂ.ಆರ್.ಗೋಪಶೆಟ್ಟಿ ಅಧ್ಯತೆ ವಹಿಸಿದ್ದರು. ಸುಧಾಕರ ರೇಣಕೆ, ಆಡಳಿತಾಧಿಕಾರಿ ಅಮಿತ ಕರಿಕಟ್ಟಿ, ಉಪನ್ಯಾಸಕರಾದ ಶ್ರೀಶೆಲ ಗೋಪಶೆಟ್ಟಿ, ಶ್ರೀಧರ ಯಲಿಗಾರ, ಎಸ್.ಪಿ. ಕಾಮಣ್ಣವರ, ಪಿ.ಬಿ. ಪಾಟೀಲ, ಪಿ.ಎ್. ಪಟ್ಟಣಶೆಟ್ಟಿ, ಟಿ.ಎ. ತುಪ್ಪಳ್ಳಿ, ಬಿ.ಎಲ್. ರಾಯನಗೌಡ್ರ, ವಿಜಯ ಜಂತ್ಲಿ, ಪಿ.ವಿ. ಪೋಳ, ಡಿ.ಎಂ.ಅಗಸಿಮನಿ, ಮಂಜುನಾಥ ಕಂಬಾಳಿಮಠ ಇದ್ದರು.