

ಮುನವಳ್ಳಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಶಿಕ್ಷಕರ ಮಾರ್ಗದರ್ಶನದಲ್ಲಿ ನಿರಂತರ ಅಧ್ಯಯನ ಮಾಡಬೇಕು ಎಂದು ಬೆಂಗಳೂರು ನಪತುಂಗ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ.ಶ್ರೀನಿವಾಸ ಬಳ್ಳಿ ಹೇಳಿದರು.
ಪಟ್ಟಣದ ಜೆ.ಎಸ್.ಪಿ. ಸಂಘದ ಅಜ್ಜಪ್ಪ ಗಡಮಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿ.ಎ.,ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ, ಗೌರವ ಸನ್ಮಾನ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದ ವಿಶೇಷ ಆಮಂತ್ರಿತರಾಗಿ ಮಾತನಾಡಿದರು. ಬರುವ ಕಷ್ಟಗಳನ್ನು ಮೆಟ್ಟಿ ಸುಂದರ ಬದುಕು ರೂಪಿಸಿಕೊಳ್ಳಿ ಎಂದರು.
ಸವದತ್ತಿ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ನೈಪುಣ್ಯತೆ ಹೆಚ್ಚಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಸ್.ಯಕ್ಕುಂಡಿ ಮಾತನಾಡಿ, ವಿದ್ಯಾಭ್ಯಾಸ ಮುಗಿದ ನಂತರವೂ ಸಮಾಜದ ಬಗ್ಗೆ ಕಳಕಳಿ ಹೊಂದಿ ದೇಶವನ್ನು ಅಭಿವದ್ಧಿಯತ್ತ ಸಾಗಿಸಲು ಕೈಜೋಡಿಸಬೇಕೆಂದರು. ಪ್ರಾಚಾರ್ಯ. ಡಾ. ಎಂ.ಎಸ್. ಬಾಗೇವಾಡಿ ಮಾತನಾಡಿದರು. ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಎಂ.ಎಸ್.ಕಲಾದಗಿ, ಗುರುಶ್ರೇಷ್ಠ ಪ್ರಶಸ್ತಿ ಪಡೆದ ಮಲ್ಲಿಕಾರ್ಜುನ ಚುಳಕಿಮಠ ಹಾಗೂ ಶ್ರೀಶೈಲ ಗೋಪಶೆಟ್ಟಿ ಸೇರಿದಂತೆ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಚೇರ್ಮನ್ ಎಂ.ಆರ್.ಗೋಪಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಟಿ.ಎ.ಪಿ.ಎಂ.ಎಸ್. ಅಧ್ಯಕ್ಷ ರವೀಂದ್ರ ಯಲಿಗಾರ, ಸುಧಾಕರ ರೇಣಕೆ, ಆಡಳಿತಾಧಿಕಾರಿ ಅಮಿತ ಕರೀಕಟ್ಟಿ ಡಾ. ಎ.ಎಸ್. ಅಮೋಮಠ, ಎಂ.ಜಿ.ಹೊಸಮಠ, ಶ್ರೀಧರ ಯಲಿಗಾರ, ಎಸ್.ಪಿ.ಕಾಮಣ್ಣವರ, ಪಿ.ಬಿ.ಪಾಟೀಲ. ಪಿ.ಎ್.ಪಟ್ಟಣಶೆಟ್ಟಿ. ಟಿ.ಎ.ತುಪ್ಪಳ್ಳಿ. ಬಿ.ಎಲ್. ರಾಯನಗೌಡ್ರ, ವಿಜಯ ಜಂತ್ಲಿ, ಎಸ್.ಎಚ್.ಮುದ್ದಾಪುರ, ಟಿ.ವಿ. ಪೋಳ, ಆರ್.ಎ. ಮೇಟಿ, ಮಂಜುನಾಥ ಕಂಬಾಳಿಮಠ ಇತರರು ಇದ್ದರು.