ವಿದ್ಯಾರ್ಥಿಗಳು ಕಲಾಸಕ್ತಿ ಬೆಳೆಸಿಕೊಳ್ಳಲಿ

web4
ಇಟಗಿ ಚನ್ನಮ್ಮ ರಾಣಿ ಸ್ಮಾರಕ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರುದ್ರಪ್ಪ ತುರಮರಿ, ಬಸವರಾಜ ಸಾಣಿಕೊಪ್ಪ, ವಿ.ಬಿ.ಸಾಣಿಕೊಪ್ಪ ಇತರರಿದ್ದರು.
Published on

ಇಟಗಿ: ಕಲೆ, ಸಾಹಿತ್ಯ, ನಾಟಕ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಮೂಲಕ ಉತ್ತಮ ನಾಗರಿಕರಾಗಬೇಕು ಎಂದು ಇಟಗಿ ಗ್ರಾಪಂ ಅಧ್ಯಕ್ಷ ರುದ್ರಪ್ಪ ತುರಮರಿ ಹೇಳಿದರು.

ಇಲ್ಲಿನ ಚನ್ನಮ್ಮ ರಾಣಿ ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ತಾಪಂ ಮಾಜಿ ಸದಸ್ಯ ಬಸವರಾಜ ಸಾಣಿಕೊಪ್ಪ ಮಾತನಾಡಿ, ವಿದ್ಯಾರ್ಥಿಗಳು ಉನ್ನತ ಸಾಧನೆ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ವಿ.ಬಿ.ಸಾಣಿಕೊಪ್ಪ, ಜಿ.ಕೆ.ಪುಂಡಿ, ಎಸ್.ಪಿ.ಸಾಣಿಕೊಪ್ಪ, ಬಿ.ವಿ.ಬೆಣಚಮರ್ಡಿ, ಎಸ್.ಕೆ.ಕುರಗುಂದ, ಪ್ರಾಚಾರ್ಯ ಎಸ್.ಎಸ್.ಶಾಸಿ, ಆರ್.ಬಿ.ಹುಣಶೀಕಟ್ಟಿ, ವಿ.ಎಸ್.ಮುಚಖಂಡಿಮಠ, ಕೆ.ಬಿ.ಕಾಪೋಲಿ, ಐ.ಆರ್.ಕರಮಳ್ಳನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net