ವಿದ್ಯಾರ್ಥಿಗಳು ಉತ್ತಮರ ಗೆಳೆತನ ಮಾಡಬೇಕು

9Kagwad1
ಶೇಡಬಾಳದ ಎಸ್.ಎಸ್.ಎಸ್ ಸಮಿತಿಯ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ನೇಮಿನಾಥ ತಪಕೇರಿ ಮಾತನಾಡಿದರು. ವಿಜಯಕುಮಾರ ಅಕಿವಾಟೆ, ವಿನೋದ ಬರಗಾಲೆ, ಬಾಹುಬಲಿ ಬಣಜಿಗವಾಡ, ಸನ್ಮತಿ ಪಾಟೀಲ, ಎನ್.ಎಸ್.ಪಾಟೀಲ, ನೇಮಗೌಡ ಪಾಟೀಲ ಇತರರಿದ್ದರು.
Published on

ಕಾಗವಾಡ: ವಿದ್ಯಾರ್ಥಿಗಳು ಉತ್ತಮರ ಗೆಳೆತನ ಮಾಡಿ ಆದರ್ಶ ಗುಣಗಳನ್ನು ಬೆಳೆಸಿಕೊಂಡು ಗುರಿಯತ್ತ ಸಾಗಬೇಕು ಎಂದು ನಿಪ್ಪಾಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ನೇಮಿನಾಥ ತಪಕೇರಿ ಹೇಳಿದರು.

ಸಮೀಪದ ಶೇಡಬಾಳ ಪಟ್ಟಣದ ಎಸ್.ಎಸ್.ಎಸ್. ಸಮಿತಿ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.

ವಿವಿಧ ಸ್ಪರ್ಧೆಯಲ್ಲಿ ಸಾಧನೆ ಮಾಡಿದವರು ಹಾಗೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಕಾಗವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ ಅಕಿವಾಟೆ ಮಾತನಾಡಿದರು.
ಕಾಲೇಜಿನ ಕಾರ್ಯ ಕಾರಿ ಸಮಿತಿ ಉಪಾಧ್ಯಕ್ಷ ವಿನೋದ ಬರಗಾಲೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಬಾಹುಬಲಿ ಬಣಜಿಗವಾಡ, ಸನ್ಮತಿ ಪಾಟೀಲ, ಎನ್.ಎಸ್.ಪಾಟೀಲ, ನೇಮಗೌಡ ಪಾಟೀಲ, ಅಕ್ಕಾತಾಯಿ ಮುಜಾವರ, ಸುನೀತಾ ಮಾಕಣ್ಣವರ, ಸತೀಶ ಪಾಟೀಲ, ಅಜಿತ ನಾಂದ್ರೆ, ದಾದಾ ಮಾಲಗಾಂವೆ, ಬಿ.ಎಸ್.ಸೋಕಾರೆ, ಎಸ್.ಆರ್.ಪರುತಗಾಲೆ, ಪಿ.ಕೆ.ದೊಡಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net