

ಚಿಕ್ಕಮಗಳೂರು: ವಿದ್ಯಾರ್ಥಿಗಳು ಇಂಜಿನಿಯರಿAಗ್ ಪಠ್ಯಕ್ರಮದ ಹೊರತಾಗಿಯೂ ಚಿಂತನೆ ನಡೆಸಬೇಕು. ಆಗ ಹೊಸತನವನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯವಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನವನ್ನು ಪರಿಷ್ಕರಿಸುವ ಮಟ್ಟಕ್ಕೆ ಬೆಳೆಯಬೇಕು ಎಂದು ಸೆಲ್ಫಿ ಪೇಜ್ ಡೆವೆಲಪರ್ಸ್ ಪ್ರೆÊವೇಟ್ ಲಿಮಿಟೆಡ್‌ನ ಸ್ಥಾಪಕ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ನಂಜೇಶ್ ಬೆಣ್ಣೂರು ತಿಳಿಸಿದರು.
ನಗರದ ಎಐಟಿ ಕಾಲೇಜಿನ ಆರ್ಟಿಫಿಯಲ್ ಇಂಟಲಿಜೆನ್ಸ್ ಮತ್ತು ಮೆಶಿನ್ ಲರ್ನಿಂಗ್ ವಿಭಾಗದಿಂದ ಶುಕ್ರವಾರ ಆಯೋಜಿಸಲಾಗಿದ್ದ ಎರಡು ದಿನಗಳ ರಾಷ್ಟಿçÃಯ ಮಟ್ಟದ ತಾಂತ್ರಿಕ ನಾವೀನ್ಯತೆ ಕಾರ್ಯಾಗಾರ ಇಗ್ನೆÊಟ್‌ನಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್‌ಗೆ ಕಾಯದೆ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸಿ ಹೆಸರುಗಳಿಸಲು ಮುಂದೆಬರಬೇಕು. ಇದಕ್ಕೆ ಸೂಕ್ತ ಮನಸ್ಥಿತಿಯೂ ಬೇಕು. ಆಗ ಮಾತ್ರ ಶೇ. ೧೦೦ರಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಐಟಿ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಕ್ಯಾಪುಲಸ್ ಟೆಕ್ನಾಲಜಿ ಪ್ರೆÊವೇಟ್ ಲಿಮಿಟೆಡ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ನಿತಿನ್ ಕಾಮತ್ ಮಾತನಾಡಿ, ವಿಧ್ಯಾರ್ಥಿಗಳು ಯಾವಾಗಲೂ ಸ್ವಂತ ಪರಿಶ್ರಮದಿಂದ ಮುಂದೆ ಬರಬೇಕು. ತಾಂತ್ರಿಕವಾಗಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ತಾವು ಪೇಸ್ ರೆಕಗ್ನೇಷನ್ ಮತ್ತು ಮೊಬೈಲ್ ತಂತ್ರಜ್ನಾನ ಬಳಸಿ ಕರ್ನಾಟಕ ಪೋಲೀಸ್ ಇಲಾಖೆಗೆ ಅನುಕೂಲವಾಗುವಂಥ ಆ್ಯಪ್ ರೂಪಿಸಿದ್ದು ಖುಷಿ ತಂದಿದೆ. ಬೆಳಗಾವಿ ಮತ್ತು ಭುವನೇಶ್ವರ್ ಸ್ಮಾರ್ಟ್ ಸಿಟಿ ಯೊಜನೆಗಳಲ್ಲಿ ಭಾಗವಹಿಸಿದ್ದು ತೃಪ್ತಿ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಸಿ.ಟಿ.ಜಯದೇವ್ ಮಾತನಾಡಿ, ವಿಧ್ಯಾರ್ಥಿಗಳು ಯಾವಾಗಲೂ ಕಠಿಣ ಪರಿಶ್ರಮ, ಅರ್ಪಣಾ ಮನೋಭವ ಮತ್ತು ಬಲವಾದ ಮನೋಸ್ಥಿತಿ ಹೊಂದಿರಬೇಕು. ಮುಂಬರುವ ದಿನಗಳಲ್ಲಿ ತಾಂತ್ರಿಕ ನೈಪುಣ್ಯತೆಗೆ, ನಾವೀನ್ಯತೆಗೆ, ಸಮಸ್ಯೆ ಬಗೆಹರಿಸುವವರಿಗೆ ಮಾತ್ರ ಹೆಚ್ಚಿನ ಮನ್ನಣೆ ದೊರೆಯುತ್ತದೆ. ಇಲ್ಲಿ ಆಯೋಜಿಸಿದ ಶಾರ್ಖಥಾನ್, ರಿವರ್ಸ್ ಹ್ಯಾಕಿಂಗ್, ಇ- ಸ್ಪೋರ್ಟ್ಸ್ ಮತ್ತಿತರೆ ಸ್ಪರ್ಧೆಗಳು ಕ್ರಿಯಾತ್ಮಕತೆಯಿಂದ ಸವಾಲುಗಳನ್ನು ಎದುರಿಸಲು ವಿನ್ಯಾಸಗೊಳಿಸಲಾಗಿದೆ. ಹೊರರಾಜ್ಯಗಳಿಂದ ವಿಧ್ಯಾರ್ಥಿಗಳು ಭಾಗವಹಿಸುತ್ತಿರುವುದು ತುಂಬಾ ಸಂತೋಷದ ಸಂಗತಿ. ಇಲ್ಲಿ ಭಾಗವಹಿಸುವ ಪ್ರತಿಯೊಂದು ವಿಧ್ಯಾರ್ಥಿ ಗುಂಪುಗಳು ಪ್ರಪಂಚದ ನೈಜ ಸಮಸ್ಯೆಗಳನ್ನು ನಾವೀನ್ಯತೆಗೆ ಅಳವಡಿಸಿ ನವೀನ ಪರಿಹಾರಗಳನ್ನು ಕಂಡುಕೊAಡು ಹೆಚ್ಚಿನ ಪ್ರಗತಿಯನ್ನು ಸಾಧಿಸಿ ಎಂದು ಕರೆನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಡಾ. ಎಂ.ಸುನೀತಾ, ಪ್ರಮುಖರಾದ ಜೆ.ಎಸ್.ಅರ್ಜುನ್, ಚೈತನ್ಯ, ಪ್ರಿಯದರ್ಶಿನಿ, ಸಿಮ್ರಾ, ಶೃತಿ, ಫರ್ಜೀನ್ ಮತ್ತಿತರರಿದ್ದರು.