

ಹೊಳೆನರಸೀಪುರ: 77ನೇ ಸ್ವಾತಂತ್ರ್ಯ ದಿನವನ್ನು ಪಟ್ಟಣದ ಲಯನ್ಸ್ ಕ್ಲಬ್ ಮತ್ತು ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ ತಾಲೂಕಿನ ಬೆಟ್ಟದ ಸಾತೇನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಯಿತು.
ಶಾಲಾ ಮಕ್ಕಳಿಗೆ ನೋಟ್ ಬುಕ್ಸ್, ಪೆನ್ಸಿಲ್, ಪೆನ್ ಹಾಗೂ ಇತರ ಪಠ್ಯೇತರ ಪರಿಕರಗಳನ್ನು ವಿತರಿಸಲಾಯಿತು. ಅಲ್ಲದೆ ವಿಧ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಆರ್.ಡಿ.ರವೀಶ್, ವಕೀಲ ಅಜಯ್, ಮನಿಷಾ, ದೇವರಾಜು, ಮಹಮದ್ ಖಾಲೀದ್ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮದ ಮುಖಂಡರು ಹಾಜರಿದ್ದರು.