

ಮುನವಳ್ಳಿ: ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ದೇಶ ಕಟ್ಟಲು ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಮುನವಳ್ಳಿ ಪಿಕೆಪಿಎಸ್ ಅಧ್ಯ ಅಂಬರೀಷ ಯಲಿಗಾರ ಹೇಳಿದರು.
ಪಟ್ಟಣದ ಚನ್ನಬಸವ ಸ್ವಾಮೀಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಸ್ತು, ಸಂಯಮ ಅಳವಡಿಸಿಕೊಂಡು ನಿರಂತರ ಓದಿನ ಮೂಲಕ ಸಾಧಕರಾಗಬೇಕು ಎಂದರು.
ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ ಮಾತನಾಡಿ, ಮೌಲ್ಯವುಳ್ಳ ಶಿಣದ ಜತೆಗೆ ಉತ್ತಮ ಸಂಸ್ಕಾರ ನೀಡಿದರೆ ವಿದ್ಯಾರ್ಥಿಗಳು ಸತಜೆಯಾಗಲು ಸಾಧ್ಯವಿದೆ ಎಂದರು. ವಕೀಲ ಕೃಷ್ಣ ಗುದಗೊಪ್ಪ ಮಾತನಾಡಿದರು.
ಸಾಧಕ ರೈತ ಜಗದೀಶ ಹಿರೇಮಠ, ಶಿಕ ಎಂ.ಎ.ಕಮತಗಿ, ವೈ.ಟಿ.ತಂಗೋಜಿ, ಸುಧೀರ ವಾಗೇರಿ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಸ್ಥೆಯ ಉಪಾಧ್ಯ ಅರುಣಗೌಡ ಪಾಟೀಲ ಅಧ್ಯತೆ ವಹಿಸಿದ್ದರು. ಸಂದ ನಿರ್ದೇಶಕರಾದ ಶಂಕರ ಗಯ್ಯಾಳಿ, ಈರಣ್ಣ ಸಂಕಣ್ಣವರ, ವಿಜಯಲಕ್ಷಿ$್ಮ ಗೊರಾಬಾಳ, ಪ್ರಾಚಾರ್ಯ ಕೆ.ಬಿ.ನಲವಡೆ, ಎಂ.ಎಚ್.ಪಾಟೀಲ, ಐ.ಕೆ.ಮಠಪತಿ, ಗಿರೀಶ ಎಂ,, ಮಂಜುಳಾ ಭಾಂಡೇಕರ, ಅಶೋಕ ಸಂಕಣ್ಣವರ, ಎನ್.ಎಸ್.ಕಬ್ಬೂರ, ಆರ್.ಎಚ್. ಪೂಜೇರಿ, ಗಾಯಿತ್ರಿ ಹಿರೇಮಠ, ಜಿ.ಬಿ.ಕೊಪ್ಪದ, ಶೇಖರ ಮುಪ್ಪಿನವರಮಠ, ಪ್ರಸಾದ ಪಶುಪತಿಮಠ, ಶ್ವೇತಾ ನಲಗೆ ಇತರರು ಇದ್ದರು.