ವಿದ್ಯಾರ್ಥಿಗಳಿಗೆ ಸಸಿ ವಿತರಣೆ

Shetkar School - Copy
Published on

ಬೀದರ್: ನಗರದ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವನ ಮಹೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು.
ಚಿದಂಬರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಸಿದ್ಧಾರೂಢ ಮಠದ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಸಸಿ ವಿತರಿಸಿದರು.
ವಿದ್ಯಾರ್ಥಿಗಳು ಹಸಿರು ಪ್ರೀತಿ ಬೆಳೆಸಿಕೊಳ್ಳಬೇಕು. ಮನೆ ಅಂಗಳ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಸಿ ನೆಟ್ಟು, ಬೆಳೆಸಬೇಕು ಎಂದು ಹೇಳಿದರು.
ಮಕ್ಕಳು ದೇವರು, ಜನ್ಮ ಕೊಟ್ಟ ಪಾಲಕರು ಹಾಗೂ ಅಕ್ಷರ ಕಲಿಸಿದ ಗುರುವಿನ ಋಣ ಮರೆಯಬಾರದು ಎಂದು ತಿಳಿಸಿದರು.
ವಿದ್ಯೆ ಜತೆಗೆ ಸಂಸ್ಕಾರವೂ ಬಹಳ ಅವಶ್ಯಕವಾಗಿದೆ. ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಸತ್ಯ, ನ್ಯಾಯ, ನೀತಿ, ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.
ಸತತ ಪರಿಶ್ರಮದಿಂದ ಮಾತ್ರ ಜೀವನದ ಗುರಿ ತಲುಪಬಹುದು. ಉತ್ತುಂಗದ ಸ್ಥಾನಕ್ಕೆ ಏರಬಹುದು ಎಂದು ನುಡಿದರು.
ಇದೇ ವೇಳೆ ಶಾಲೆಯ 8ನೇ ತರಗತಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವೂ ಜರುಗಿತು. ಶಾಲೆಯ ಹಳೆಯ ವಿದ್ಯಾರ್ಥಿ ಡಾ. ಲೋಕೇಶ ಹಿರೇಮಠ ಮುಖ್ಯ ಅತಿಥಿಯಾಗಿದ್ದರು.
ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉದಯಭಾನು ಹಲವಾಯಿ, ಆಡಳಿತಾಧಿಕಾರಿ ಹಾವಗಿರಾವ್ ಮೈಲಾರೆ, ಉಪನ್ಯಾಸಕರಾದ ಮಾಣಿಕ ಪಾಂಚಾಳ, ಸೂರ್ಯಕಾಂತ ಐನಾಪುರೆ, ಶಾಲೆಯ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net