ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ವಿತರಣೆ

2 RPT 1
ರಿಪ್ಪನಪೇಟೆ ಸಮೀಪದ ಅರಸಾಳು ಸರ್ಕಾರಿ ಶಾಲೆಯ ಮಕ್ಕಳಿಗೆ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ವತಿಯಿಂದ ಶೈಕ್ಷಣಿಕ ಪರಿಕರ ಹಾಗೂ ಛತ್ರಿಗಳನ್ನು ವಿತರಿಸಲಾಯಿತು. ಶ್ರೀಧರ್, ಅಜೇಶ್, ಲೇಖನ ಚಂದ್ರನಾಯಕ್, ರಫಿ, ವಿನಾಯಕ, ಗುಂಡಣ್ಣ, ನೇಮಣ್ಣ, ಪ್ರಭಾಕರ್ ಆಚಾರ್ ಇತರರಿದ್ದರು.
Published on

ರಿಪ್ಪನ್‌ಪೇಟೆ: ಪಟ್ಟಣದ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನಿಂದ ಅರಸಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳು ಮತ್ತು ಛತ್ರಿಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ತೀರ್ಥಹಳ್ಳಿ ಸೀನಿಯರ್ ಚೇಂಬರ್ ಜೆಸಿಐ ನಿಕಟಪೂರ್ವ ಅಧ್ಯಕ್ಷ ಎಚ್.ಎನ್.ಸೂರ್ಯನಾರಾಯಣ್, ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಂಡು ಭವಿಷ್ಯದ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಬೇಕೆಂದರು.

ಸೀನಿಯರ್ ಚೇಂಬರ್‌ನ ರಿಪ್ಪನ್‌ಪೇಟೆ ಅಧ್ಯಕ್ಷ ಪಿಯೂಸ್ ರೋಡ್ರಿಗಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪಾತ್ರರಾಗಬಹುದು ಎಂದರು.

ಸೀನಿಯರ್ ಚೇಂಬರ್ ಕಾರ್ಯದರ್ಶಿ ಶ್ರೀಧರ್, ಖಜಾಂಚಿ ಅಜೇಶ್, ಉಪಾಧ್ಯಕ್ಷೆ ಲೇಖನ ಚಂದ್ರನಾಯಕ್, ರಫಿ, ವಿನಾಯಕ, ಗುಂಡಣ್ಣ, ನೇಮಣ್ಣ, ಪ್ರಭಾಕರ್ ಆಚಾರ್, ಅನೂಪ್ ಬಟ್ಟೆ ಮಲ್ಲಪ್ಪ, ದಾನಪ್ಪ, ಅಶ್ವಕ್, ಸಂಗೀತ ಶಾಜಿ, ಮುಖ್ಯ ಶಿಕ್ಷಕಿ ಪವಿತ್ರಾ, ಫೌಜಿಯಾ ಖಲಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೋಜಿರಾವ್, ಸಹ ಶಿಕ್ಷಕರಾದ ಶ್ರೀಧರ್, ಸಬಾಸ್ಟಿನ್ ಮ್ಯಾಥ್ಯೂಸ್, ನಾಗರಾಜ್ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net