ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ಸಂಭ್ರಮ

bkt-23-4
ಬಾಗಲಕೋಟೆ ನಗರದ ಬಿವಿವಿ ಸಂಘದ ಆಯುರ್ವೇಽಕ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ಸಂಭ್ರಮ.
Published on

ಬಾಗಲಕೋಟೆ: ಇಲ್ಲಿನ ಬಿವಿವಿ ಸಂಘದ ಆಯುರ್ವೇಽಕ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯಲ್ಲಿ ಶನಿವಾರ ನಡೆದ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ಕಾರ್ಯಕ್ರಮ ಶಾಸೊöÃಕ್ತವಾಗಿ ಸಂಭ್ರಮದಿ0ದ ಜರುಗಿತು.

ಆಯುರ್ವೇಽಕ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಗುರುಕುಲ ಪದ್ಧತಿಗೆ ವಿಶೇಷ ಸ್ಥಾನವಿದೆ. ಗುರು, ಶಿಷ್ಯ ಸಂಬAಧಕ್ಕೆ ಹಲವು ಮೌಲ್ಯಯುತ ಆಧಾರಗಳಿವೆ. ದೇಶದಲ್ಲಿ ಅನಾದಿ ಕಾಲದಿಂದಲೂ ಶಿಕ್ಷಣ ಮತ್ತು ಗುರು ಶಿಷ್ಯ ಸಂಬAಧಕ್ಕೆ ಬಹಳ ಮೌಲ್ಯಯುತ ಸ್ಥಾನವಿತ್ತು. ಅದನ್ನ ಕಾಪಾಡುವ ನಿಟ್ಟಿನಲ್ಲಿ ಮತ್ತು ಮುಂದಿನ ಜನಾಂಗಕ್ಕೆ ಉಳಿಸುವ ಈ ವಿಶಿಷ್ಟ ಕಾರ್ಯಕ್ರಮವಾಗಿದೆ ಎಂದರು.

ಶ್ವೇತ ವಸöಧಾರಿಗಳಾಗಿ ವಿದ್ಯಾರ್ಥಿಗಳು ಧನ್ವಂತರೀ ಹೋಮದಲ್ಲಿ ಪಾಲ್ಗೊಂಡು ಪೂರ್ಣಾಹುತಿ ಸಲ್ಲಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ಸಂಗಣ್ಣ ಕಲಾದಗಿ, ಚಂದ್ರಶೇಖರ ಶೆಟ್ಟರ, ಪ್ರಭಾರಿ ಪ್ರಾಚಾರ್ಯ ಡಾ.ಎಂ.ಎಸ್.ಹಿರೇಮಠ, ಡಾ.ಆರ್.ಐ.ಜಂಬಗಿ. ಡಾ.ವಿ.ಎಸ್.ಚೌದರಿ, ಡಾ.ಜಿ.ಎಸ್.ಕುಲಕರ್ಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net