ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ

rotary club hubballi
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕಳೆದ ಸಾಲಿನಲ್ಲಿ (2023-24) ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಹುಬ್ಬಳ್ಳಿ ರೋಟರಿ ಕ್ಲಬ್ ಚಾರಿಟಬಲ್ ಟ್ರಸ್ಟ್, ಎಚ್.ಕೆ.ಸುಮಂಗಲಾ ಚಾರಿಟಬಲ್ ಟ್ರಸ್ಟ್ ಮತ್ತು ಅಂಬಾಜಿ ಚಾರಿಟಬಲ್ ಟ್ರಸ್ಟ್​ಗಳ ವತಿಯಿಂದ ನಗರದ ರೋಟರಿ ಭವನದಲ್ಲಿ ಇತ್ತೀಚೆಗೆ ಶಿಷ್ಯ ವೇತನ ವಿತರಿಸಲಾಯಿತು.

ಡಾ. ಮಿಥಾಲಿ, ಡಾ.ಎಸ್.ಎಸ್.ಹಿರೇಮಠ, ರೋಟರಿ ಕ್ಲಬ್ ಚಾರಿಟಬಲ್ ಟ್ರಸ್ಟ್ ಉಪಾಧ್ಯಕ್ಷ ಎಂ.ಕೆ. ಪಾಟೀಲ ಮತ್ತು ಎಂ.ಜಿ.ಸಾಲಿಮಠ ವಿದ್ಯಾರ್ಥಿಗಳಿಗೆ ಶಿಷ್ಯ ವೇತನದ ಚೆಕ್ ವಿತರಿಸಿದರು.

ರೋಟರಿ ಜಿಲ್ಲಾ ಸಮನ್ವಯ ಸಮಿತಿ ಅಧಿಕಾರಿ ಮಂಜುನಾಥ ಹೊಂಬಳ ಮಾತನಾಡಿ ವಿದಾರ್ಥಿಗಳು ಟ್ರಸ್ಟ್ ನೀಡಿದ ಹಣದ ಸದುಪಯೋಗ ಪಡೆದುಕೊಂಡು ಮುಂದೆ ದೊಡ್ಡವರಾದ ಮೇಲೆ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡುವಂತಾಗಿರಿ. ಇನ್ನು ಹೆಚ್ಚಿನ ಅಂಕಗಳನ್ನು ಪಡೆದರೆ ಹೆಚ್ಚಿನ ಮೊತ್ತದ ಶಿಷ್ಯವೇತನ ನಿಡುತ್ತೇವೆ ಎಂದು ಹೇಳಿದರು.

ಅಧ್ಯಕ್ಷ ಬಾಪುಗೌಡ ಬಿರಾದಾರ ಸ್ವಾಗತಿಸಿದರು. ಕಾರ್ಯದರ್ಶಿ ಎ.ವಿ ಸಂಕನೂರ ವಂದಿಸಿದರು. ರೋಟರಿ ಕ್ಲಬ್ ಸದಸ್ಯರಾದ ಉಮೇಶ ಗಡಾದ, ಶಿವಪುತ್ರ ಮುಕರ್ತಿಹಾಳ, ಈಶ್ವರ ಗುಳಗಣ್ಣವರ, ಚೇತನ ಸಂಗವಿ, ಪ್ರಕಾಶ ಸಿಂಗಾನಿ, ಬಾಳಾಸಾಹೇಬ ಪಾಟೀಲ, ಅಮರ ಸೂಜಿ, ಪ್ರಶಾಂತ ಹೆಬಸೂರ, ಪ್ರಕಾಶ ಕಲಮನಿ, ಶಿವಾನಂದ ಗುಂಜಾಳ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net