

ಕಾಗವಾಡ: ನಗರಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಬೇಗ ಉದ್ಯೋಗಾವಕಾಶ ಪಡೆದುಕೊಳ್ಳುತ್ತಾರೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಬೋಧನೆಯ ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆಗಳಾಗಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.
ಪಟ್ಟಣದ ಶಿವಾನಂದ ಮಹಾವಿದ್ಯಾಲಯದ ಐಕ್ಯೂಎಸಿ, ಇತಿಹಾಸ, ಅರ್ಥಶಾಸ್ತ್ರ ಹಾಗೂ ಶಿಕ್ಷಣಶಾಸ್ತ್ರ ವಿಭಾಗಗಳು ಮತ್ತು ಇತಿಹಾಸ ಸಂಶೋಧನಾ ಮಂಡಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮೀಣ ಭಾರತದಲ್ಲಿ ಉನ್ನತ ಶಿಕ್ಷಣ: ವಿಕಸಿತ ಭಾರತ-೨೦೪೭ ಸಾಧನೆಗೆ ಐತಿಹಾಸಿಕ ಮತ್ತು ಆರ್ಥಿಕ ಪ್ರಯತ್ನಗಳು ಕುರಿತು ಸ್ವವಿತ್ತ ಪೋಷಿತ ಏಕದಿನ ರಾಷ್ಟ್ರಮಟ್ಟದ ಬಹುಶೀಸ್ತಿಯ ವಿಚಾರ ಸಂಕಿರಣದ ಕುರಿತು ಮಾತನಾಡಿ, ಕೌಶಲ ಆಧಾರಿತ ಶಿಕ್ಷಣದಿಂದ ಗ್ರಾಮೀಣ ವಿದ್ಯಾರ್ಥಿಗಳ ಜೀವನ ಸುಧಾರಣೆಯಾಗಬೇಕು ಎಂದರು.
ಸಂಸ್ಥೆಯ ಏಕನ್ಯಾಸಧಾರಿ ಪದವಿಪೂರ್ವ ಶ್ರೀಯತೀಶ್ವರಾನಂದ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪ್ರಾಧ್ಯಾಪಕ ಡಾ.ಮೀನಾ ಮೋಹಿತೆ, ಡಾ.ಮನೋಹರ ಕೋರೆ, ಡಾ.ಜಯಪಾಲ ಸಾವಂತ, ಮೇಜರ್ ವಿ.ಎಸ್.ತುಗಶೆಟ್ಟಿ, ಡಾ.ಎಸ್.ಎ.ಕರ್ಕಿ, ಬಿ.ಎ.ಪಾಟೀಲ, ಬಿ.ಡಿ.ಧಾಮಣ್ಣವರ, ಪಿ.ಎಸ್.ಪಟ್ಟಣಶೆಟ್ಟಿ ಇತರರಿದ್ದರು. ಸಾನಿಕಾ ಜಾಧವ ಪ್ರಾರ್ಥಿಸಿದರು. ಡಾ.ಚಂದ್ರಶೇಖರ ವೈ. ಸ್ವಾಗತಿಸಿದರು. ಪ್ರೋ.ಜೆ.ಕೆ.ಪಾಟೀಲ ನಿರೂಪಿಸಿದರು. ಪ್ರೊ.ಎಸ್.ಎಸ್.ಫಡತರೆ ವಂದಿಸಿದರು.