ವಿದ್ಯಾರ್ಥಿಗಳಿಗೆ ವೇದ ಗಣಿತ ಕಾರ್ಯಾಗಾರ

25ss1upanyasa
ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಮೈಸೂರಿನ ಮ್ಯಾಥ್ಸ್ ಜೂನಿಯರ್ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವೇದ ಗಣಿತ ಕಾಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಸಿ.ಕೆ.ದಿನೇಶ್ ಮಾಹಿತಿ ನೀಡಿದರು. ನಳಿನಿ, ವಿಶ್ವನಾಥ್ ಇತರರು ಇದ್ದರು.
Published on

ಶನಿವಾರಸಂತೆ: ಮೈಸೂರಿನ ಮ್ಯಾಥ್ಸ್ ಜೂನಿಯರ್ ಸಂಸ್ಥೆ, ಶನಿವಾರಸಂತೆ ಹಾಗೂ ಹಂಡ್ಲಿ ಕ್ಲಸ್ಟರ್ ವತಿಯಿಂದ ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಶನಿವಾರ ವೇದ ಗಣಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಮ್ಯಾಥ್ಸ್ ಜೂನಿಯರ್ ಸಂಸ್ಥೆ ಸ್ಥಾಪಕ ಗಣಪತಿ, ಸಂಸ್ಥೆಯ ಶರಣ್ಯ ಮತ್ತು ವಿನುತಾ ಅವರು ವೇದ ಗಣಿತದ ವಿಶೇಷತೆ, ಇವುಗಳ ಉಪಯೋಗ, ವೇದ ಗಣಿತದ ಜ್ಞಾನದಿಂದ ಮಕ್ಕಳಿಗೆ ದೊರಕುವ ಲಾಭ, ವೇದ ಮತ್ತು ಗಣಿತದಲ್ಲಿನ ಲೆಕ್ಕ್ಕಾಚಾರ, ಅಂಕಿಗಳ ನಡುವಿನ ಸಂಬಂಧಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಬೋರ್ಡ್‌ಮೇಲೆ ವೇದ ಮತ್ತು ಗಣಿತವನ್ನು ಪ್ರಾಯೋಗಿಕವಾಗಿ ಬರೆದು ತೋರಿಸಿದ್ದು ವಿಶೇಷವಾಗಿತ್ತು. ಕಾರ್ಯಾಗಾರದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ವೇದ ಗಣಿತದ ಬಗ್ಗೆ ಪರೀಕ್ಷೆ ನಡೆಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಹಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶನಿವಾರಸಂತೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಉರ್ದು ಪ್ರಾಥಮಿಕ ಶಾಲೆ ಮತ್ತು ಭಾರತಿ ಪ್ರೌಢಶಾಲೆಯ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಹಂಡ್ಲಿ ಸರ್ಕಾರಿ ಪ್ರೌಢಶಾಲೆ ಹಿರಿಯ ಶಿಕ್ಷಕಿ ನಳಿನಿ, ಶನಿವಾರಸಂತೆ ಮಾದರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವಿಶ್ವನಾಥ್, ಉರ್ದು ಶಾಲೆ ಮುಖ್ಯ ಶಿಕ್ಷಕಿ ಸೇವಂತಿ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ, ಭಾರತಿ ಪ್ರೌಢಶಾಲೆ ಮುಖ್ಯ ಶಿಕ್ಷಕ ನರಸಿಂಹಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net