ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಮುಖ್ಯ

Aliff
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಎದುರು ಅಲೀಫ್ ಓವರ್​ಸೀಸ್ ಎಜ್ಯುಕೇಶನ್ ಆಫೀಸ್ ಉದ್ಘಾಟನೆ ಇತ್ತೀಚೆಗೆ ನಡೆಯಿತು.

ಉದ್ಘಾಟಿಸಿದ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಕಾಶ ತೇವರಿ ಮಾತನಾಡಿ, ಕಲಿಕೆಯ ಹಂತದಲ್ಲಿ ಬಹಳಷ್ಟು ವಿದ್ಯಾರ್ಥಿಗಳ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರುವುದಿಲ್ಲ. ಈ ಹಂತದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಬಹಳ ಮಹತ್ವದ್ದಾಗಿರುತ್ತದೆ ಎಂದರು.

ಉತ್ತಮ ಬವಿಷ್ಯ ರೂಪಿಸಿಕೊಳ್ಳಲು ಸರಿಯಾದ ಕಾಲೇಜ್, ಕೋರ್ಸ್ ಜತೆಗೆ ಯಾವ ದೇಶದಲ್ಲಿ ವ್ಯಾಸಂಗ ಮಾಡಿದರೆ ಉತ್ತಮ ಎಂಬುದು ಅತೀ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಆಲೀಫ್ ಓವರ್​ಸೀಸ್ ಎಜ್ಯುಕೇಶನ್ ಆಫೀಸ್ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಲಿ ಎಂದು ಹಾರೈಸಿದರು.

ಅಲೀಫ್ ಸಂಸ್ಥೆಯ ಕರ್ನಾಟಕ ನಿರ್ದೇಶಕಿ ನಿಕಿತಾ ಕುಂದರ, ರಕ್ಷಿತ ಕುಂದರ, ಶಂಭುಲಿಂಗ ಉಪ್ಪಿನ, ಕೆಎಲ್​ಇ ಐಟಿ ಪ್ರಾಚಾರ್ಯ ಡಾ. ಮನು ಟಿ.ಎಂ., ಜಿ.ವಿ. ವಳಸಂಗ, ಶಾಲಾ-ಕಾಲೇಜ್​ಗಳ ಪ್ರಾಚಾರ್ಯರು, ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net