

ಶನಿವಾರಸಂತೆ: ಹಂಡ್ಲಿ ಸಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂದೀಪ್ ಹಾಗೂ ಉಪಾಧ್ಯಕ್ಷ ಅಶೋಕ್ ಅವರು ಪತ್ರಿಕಾ ದಿನಾಚರಣೆ ಅಂಗವಾಗಿ ಸೋಮವಾರ ವಿಜಯವಾಣಿ ದಿನಪತ್ರಿಕೆಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಅಬ್ದುಲ್ ನಜೀರ್ ಮಾತನಾಡಿ, ಪತ್ರಿಕಾ ವಿತರಕರು ಗಾಳಿ, ಮಳೆ, ಚಳಿ ಎನ್ನದೆ ಪ್ರತಿ ಮನೆಗಳಿಗೆ ಪತ್ರಿಕೆ ವಿತರಣಿ ಮಾಡುತ್ತಾರೆ. ಈ ಕೆಲಸವನ್ನು ಸೇವೆಯ ರೀತಿಯಲ್ಲಿ ಮಾಡುತ್ತಿದ್ದು, ಪ್ರತಿನಿತ್ಯ ಪತ್ರಿಕೆಗಳನ್ನು ಖರೀದಿ ಮಾಡಿ ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಎಸ್.ಎಂ.ಪುಷ್ಪಾ, ಸಹ ಶಿಕ್ಷಕರಾದ ಎಂ.ಸಿ.ನಳಿನಿ, ಸಾಯಿರಭಾನು, ಸುನೀತಾ ಪಿಂಟೊ, ವಿಕ್ರಾಂತ್ ಕೇಲ್ಕರ್, ಸೌಭಾಗ್ಯಾ, ಮೀರಾಸುಮನ್ ಕ್ಯಾಸ್ತಲಿನ್, ಕಾರ್ತಿಕ್ ಇತರರು ಇದ್ದರು.