ವಿದ್ಯಾರ್ಥಿಗಳಿಗೆ ಮಾಧ್ಯಮದ ಅರಿವು ಮುಖ್ಯ

ಪತ್ರಿಕಾ ದಿನಾಚರಣೆ
ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಉದ್ಘಾಟಿಸಿದರು. ವಿಜಯ್ ಹಾನಗಲ್, ಎ.ಎಸ್.ಮಹೇಶ್, ಜಿ.ಎಂ. ಹೇಮಂತ್, ಎಸ್​ಡಿಎಂಸಿ ಅಧ್ಯಕ್ಷ ತಮ್ಮಯ್ಯ ಇತರರು ಇದ್ದರು.
Published on

ಶನಿವಾರಸಂತೆ: ವಿದ್ಯಾರ್ಥಿಗಳಿಗೆ ಮಾಧ್ಯಮದ ಅರಿವು ಇದ್ದರೆ ಜ್ಞಾನಾರ್ಜನೆಗೆ ಪೂರಕವಾಗುತ್ತದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಹೇಳಿದರು.

ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ನಿತ್ಯವೂ ಪತ್ರಿಕೆಗಳನ್ನು ಓದುವುದರಿಂದ ಲೋಕಜ್ಞಾನ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಶಾಲಾ ಗ್ರಂಥಾಲಯವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಜಯ್ ಹಾನಗಲ್, ನಿವೃತ್ತ ಯೋಧ ಎ.ಎಸ್.ಮಹೇಶ್, ಮುಖ್ಯ ಶಿಕ್ಷಕ ಜಿ.ಎಂ.ಹೇಮಂತ್, ಎಸ್​ಡಿಎಂಸಿ ಅಧ್ಯಕ್ಷ ತಮ್ಮಯ್ಯ ಇತರರು ಇದ್ದರು.

ಬಹುಮಾನ ವಿಜೇತರು: ಪತ್ರಿಕಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಾಧ್ಯಮಗಳ ಪಾತ್ರ’ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ 58 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಎಚ್.ವಿ.ಪ್ರಜ್ವಲ್ (ಪ್ರ), ಎಂ.ಎಂ.ಜಯಶ್ರೀ (ದ್ವಿ) ಮತ್ತು ಕೆ.ಎಚ್.ಯಶಸ್ವಿನಿ (ತೃ) ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net