ವಿದ್ಯಾರ್ಥಿಗಳಿಗೆ ಮಣ್ಣು ಆರೋಗ್ಯ ತರಬೇತಿ

14 YERRISWAMY 02
Published on

ಬಳ್ಳಾರಿ : ತಾಲೂಕಿನ ಕೊಳಗಲ್ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯ ಮಕ್ಕಳಿಗೆ ಕೃಷಿ ಇಲಾಖೆ ವತಿಯಿಂದ ಮಣ್ಣು ಆರೋಗ್ಯ ಹಾಗೂ ಪರೀಕ್ಷಾ ವಿಶ್ಲೇಷಣೆ ಕುರಿತು ತರಬೇತಿ ನೀಡಲಾಯಿತು.
ಪ್ರಸ್ತಕ ಸಾಲಿನಲ್ಲಿ ಕೇಂದ್ರ ಪುರಸ್ಕ್ರತ ಯೋಜನೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಮಣ್ಣು ಆರೋಗ್ಯ ಅಭಿಯಾನ ಕುರಿತು ಕಾರ್ಯಕ್ರಮ ಆಯೋಜಿಸಿದ್ದು, 6 ನೇ ತರಗತಿಯಿಂದ 12 ನೇ ತರಗತಿಯ ವರೆಗಿನ ಮಕ್ಕಳಿಗೆ ಮಣ್ಣು ಆರೋಗ್ಯದ ಕುರಿತು ತರಬೇತಿ ನೀಡಲಾಯಿತು.
ಸಹಾಯಕ ಕೃಷಿ ನಿರ್ದೇಶಕ ಮೊಹಮ್ಮದ್ ರಫೀವುಲ್ಲಾ ರಜ್ವಿ ಮಾತನಾಡಿ, ಬೆಳೆಗೆ ಬೇಕಾಗಿರುವ 17 ಪೋಷಕಾಂಶಗಳ ಮಹತ್ವದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು. ಮಣ್ಣಿನ ಗುಣಧರ್ಮದ ಆಧಾರದ ಮೇರೆಗೆ ರಸಗೊಬ್ಬರಗಳನ್ನು ಬಳಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net