ವಿದ್ಯಾರ್ಥಿಗಳಿಗೆ ಬೇಕು ಸಾಧಿಸುವ ಮನೋಬಲ- ಡಾ.ನಾಗೇಶ್ ಹೇಳಿಕೆ -ಸರ್.ಎಂ.ವಿ. ಕಾಲೇಜಿನಲ್ಲಿ ಇಂಜಿನಿಯರ್ಸ್ ದಿನಾಚರಣೆ

engeneers-day.jpg
Published on

ದಾವಣಗೆರೆ: ಸತತ ಪರಿಶ್ರಮ ಹಾಗೂ ಸಾಧಿಸುವ ಛಲವಿದ್ದರೆ ಎಂತಹ ಪರೀಕ್ಷೆಯನ್ನೂ ಸುಲಭವಾಗಿ ಎದುರಿಸಬಹುದು ಎಂದು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಸಿ.ಎಂ.ನಾಗೇಶ್ ಹೇಳಿದರು.

ನಗರದ ಸರ್.ಎಂ.ವಿ. ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ದಿನಾಚರಣೆ ಹಾಗೂ ಸರ್.ಎಂ.ವಿ. ವಿದ್ಯಾಸಂಸ್ಥೆಯ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ವೃತ್ತಿಯಿರಲಿ, ವೃತ್ತಿಪರ ಕಾಳಜಿ ಅತಿಮುಖ್ಯ ಎಂದರಲ್ಲದೇ ಭಾರತೀಯ ವೈದ್ಯಕೀಯ ಮಂಡಳಿಯಲ್ಲಿ ಸ್ಥಾನ ಪಡೆಯುವ ಕ್ರಮಗಳ ಕುರಿತು ವಿವರಿಸಿದರು.

ವಾಣಿಜ್ಯ ಇಲಾಖೆಯ ಉಪ ಆಯುಕ್ತ ಪರಮೇಶ್ವರ ಗೌಡ ಮಾತನಾಡಿ ಪ್ರಾಮಾಣಿಕತೆ, ಸರಳತೆ ಇದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು. ಪ್ರತಿಯೊಬ್ಬರಲ್ಲೂ ದೇಶದ ಬಗ್ಗೆ ಕಳಕಳಿ ಇರಬೇಕು ಎಂದು ಹೇಳಿದರು.

ಕಾಲೇಜಿನ ಕಾರ್ಯದರ್ಶಿ ಎಸ್. ಜೆ. ಶ್ರೀಧರ್ ಮಾತನಾಡಿ ಸರ್.ಎಂ.ವಿಶ್ವೇಶ್ವರಯ್ಯ ಅವರಲ್ಲಿದ್ದ ಪರಿಶ್ರಮ ಅವರನ್ನು ಎತ್ತರಕ್ಕೆ ಕರೆದೊಯ್ದಿದೆ. ವಿದ್ಯಾರ್ಥಿಗಳು ಓದಿನ ಜತೆಯಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆ ಬೆಳೆಸಿಕೊಂಡರೆ ಪುರಸ್ಕಾರ ನಿಶ್ಚಿತ ಎಂದು ತಿಳಿಸಿದರು.

ಅಂಗವಿಕಲ ಪೋಷಕರ ಸಂಘದ ರೂವಾರಿ ಡಾ.ಮಹಾಬಲೇಶ್ವರ ಅವರನ್ನು ಸನ್ಮಾನಿಸಿ ಆ ಸಂಸ್ಥೆಗೆ ಕಾಲೇಜಿನ ವತಿಯಿಂದ ಒಂದು ಲಕ್ಷ ರೂ. ದೇಣಿಗೆ ನೀಡಲಾಯಿತು.

ಸಂಸ್ಥೆಯ ನಿರ್ದೇಶಕರಾದ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷ ಸುರೇಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net