ವಿದ್ಯಾರ್ಥಿಗಳಿಗೆ ನೋಟ್‍ಪುಸ್ತಕ ವಿತರಣೆ

Inner Wheel Club Photo
Published on

ಬೀದರ್: ಇನ್ನರ್ ವ್ಹೀಲ್ ಕ್ಲಬ್ ಆಫ್ ಬೀದರ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ನಿಮಿತ್ತ ಇಲ್ಲಿಯ ವಿದ್ಯಾನಗರ ಕಾಲೊನಿಯಲ್ಲಿ ಇರುವ ಡಾ. ಚನ್ನಬಸವ ಪಟ್ಟದ್ದೇವರು ಪ್ರಸಾದ ನಿಲಯದಲ್ಲಿ ಸೋಮವಾರ ಅನುಭವ ಮಂಟಪ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ನೋಟ್‍ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಅಮೃತ ಮಹೋತ್ಸವ ಸವಿ ನೆನಪಿಗಾಗಿ ನಿಲಯದ ಆವರಣದಲ್ಲಿ 20 ಸಸಿಗಳನ್ನೂ ನೆಡಲಾಯಿತು.

ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸುರೇಖಾ ಶೇರಿಕಾರ್, ಕಾರ್ಯದರ್ಶಿ ಉಮಾ ಗಾದಗೆ, ನೀತಾ ಬೆಲ್ದಾಳೆ, ಸುವರ್ಣ ಧನ್ನೂರ, ಸುಜಾತಾ ಕಾಮಶೆಟ್ಟಿ, ಸುವರ್ಣ ಚಿಮಕೋಡೆ, ಕವಿತಾ ಪ್ರಭಾ, ಆರುಂಧತಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net