ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ

26 HRS 01
ಹಿರೀಸಾವೆ ಹೋಬಳಿ ಪಿ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಕಲಿಕಾ ಪರಿಕರ ವಿತರಿಸಲಾಯಿತು. ಎಚ್.ಕೆ.ಸುಧಾಕರ್, ರೇಣುಕಾ, ಮಲ್ಲಿಕಾರ್ಜುನ್, ಚೈತ್ರಾ, ತೇಜಸ್ವಿನಿ, ಧನಲಕ್ಷ್ಮಮ್ಮ, ಪುರುಷೋತಮ್, ಅಮೃತಾ ಇದ್ದರು.
Published on

ಹಿರೀಸಾವೆ: ಉಳ್ಳವರು ತಾವು ವಿದ್ಯೆ ಕಲಿತ ಶಾಲೆಗೆ ಪ್ರೋತ್ಸಾಹ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಕೆ.ಸುಧಾಕರ್ ಹೇಳಿದರು.

ಹೋಬಳಿಯ ಪಿ.ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಉದ್ಯೋಗ ಹಾಗೂ ಸರ್ಕಾರಿ ಉನ್ನತ ಹುದ್ದೆಗಳನ್ನು ಹೊಂದಿದ ನಂತರ ಕಲಿತ ಶಾಲೆ ಮರೆಯಬಾರದು. ದುಡಿಮೆಯ ಶೇ.10 ರಷ್ಟು ಹಣದಿಂದ ಶಾಲೆಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಸಹಕಾರ ನೀಡಬೇಕು ಎಂದು ತಿಳಿಸಿದರು.

ಇಂಜಿನಿಯರ್ ಚೈತ್ರಾ ಮಾತನಾಡಿ, ನಾವು ಓದುತ್ತಿದ್ದ ಕಾಲದಲ್ಲಿ ಅಗತ್ಯ ಪುಸ್ತಕ-ಪರಿಕರಗಳಿಲ್ಲದೆ ಪರದಾಡಿದ ದಿನಗಳು ಇಂದಿಗೂ ನೆನಪಿನಲ್ಲಿವೆ. ಅಂತಹ ಸ್ಥಿತಿ ಇವತ್ತಿನ ಪೀಳಿಗೆಗೆ ಬರುವುದು ಬೇಡ ಎಂಬ ಉದ್ದೇಶದಿಂದ ಹಿರೀಸಾವೆ ಹೋಬಳಿಯ ಎಲ್ಲ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕೈಲಾದ ಸಹಕಾರ ನೀಡಲು ಮುಂದಾಗಿದ್ದೇವೆ ಎಂದರು.

ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಇಂಜಿನಿಯರ್ ವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರದುರ್ಗ ಜಿಲ್ಲೆಯ ಕಲ್ಲಹಟ್ಟಿ ಗ್ರಾಮದ ಮಲ್ಲಿಕಾರ್ಜುನ್, ಹಿರೀಸಾವೆ ಹೋಬಳಿ ಜಿನ್ನೇನಹಳ್ಳಿ ಗ್ರಾಮದ ತೇಜಸ್ವಿನಿ ಹಾಗೂ ಆರೋಗ್ಯ ಇಲಾಖೆ ಕರ್ತವ್ಯದಲ್ಲಿರುವ ಚೈತ್ರಾ ಅವರು ಶಾಲೆಯ 16 ವಿದ್ಯಾರ್ಥಿಗಳಿಗೆ ತಲಾ 450 ರೂ. ಮೌಲ್ಯದ ನೋಟ್‌ಬುಕ್ ಹಾಗೂ ಪರಿಕರಗಳನ್ನು ವಿತರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯೆ ರೇಣುಕಾ, ಎಸ್‌ಡಿಎಂಸಿ ಅಧ್ಯಕ್ಷೆ ಸವಿತಾ, ಮಕ್ಕಳ ಸಾಹಿತ್ಯ ಪರಿಷತ್ ಹಿರೀಸಾವೆ ಹೋಬಳಿ ಅಧ್ಯಕ್ಷ ಆರ್.ಶ್ರೀನಿವಾಸ್ ಉಳ್ಳಾವಳ್ಳಿ, ಮುಖ್ಯಶಿಕ್ಷಕಿ ಧನಲಕ್ಷ್ಮಮ್ಮ, ಸಹಶಿಕ್ಷಕ ಪುರುಷೋತ್ತಮ್, ಅತಿಥಿ ಶಿಕ್ಷಕಿ ಅಮೃತಾ, ಅಡುಗೆ ಸಿಬ್ಬಂದಿ ಪಂಕಜಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net