

ಭಾಲ್ಕಿ: ಮೊಬೈಲ್, ಟಿವಿ ಇತರೆ ಚಟಗಳಿಗೆ ದಾಸರಾದ ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಹೊಣೆ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಇಸಿಒ ಮಲ್ಲಿಕಾರ್ಜುನ ಕನ್ನಾಳೆ ಹೇಳಿದರು.
ಜೋಳದಪಕಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಗೋ-ಗ್ರೀನ್ ವತಿಯಿಂದ ಗುರುವಾರ ಆಯೋಜಿಸಿದ್ದ ಬೀಜದುಂಡೆ ತಯಾರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗೋ-ಗ್ರೀನ್ ರೆವೂಲೇಷನ್ ಆಯೋಜಿಸಿರುವ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯವಾಗಿದೆ. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಇಂತಹ ಸಹ ಪಠ್ಯ ಕಾರ್ಯಕ್ರಮಗಳಾದ ಪರಿಸರ ರಕ್ಷಿಸು ಕಾರ್ಯಕ್ಕೆ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಕೃಷಿ ಕೌಶಲ ಅಭಿವೃದ್ಧಿಯಾಗಿ ನಿರುದ್ಯೋಗಿ ಸಮಸ್ಯೆಯು ಪರಿಹರಿಸಿದಂತಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಎಬಿವಿಪಿ ಪ್ರಮುಖ ರೇವಣಸಿದ್ದ ಜಾಡರ, ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿದರು.
ಪ್ರೌಢಶಾಲೆಯ ಮುಖ್ಯಶಿಕ್ಷಕ ದಿಲೀಪಕುಮಾರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ವಿಶ್ವಾರಾಧ್ಯ ಪ್ರಾಸ್ತಾವಿಕ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರವಿ ಪಾಟೀಲ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಧುಕರ ಹಾವಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ರಾಜಹಂಸ, ಅಹ್ಮದ್ ಪಾಶಾ, ಮಲ್ಲಿಕಾರ್ಜುನ ಪಾಟೀಲ್ ಧನ್ನೂರ(ಎಚ್), ನಾಗಶೆಟ್ಟಿ ಖಂಡಾಳೆ, ಉಮಕಾಂತ, ರಾಜೆಪ್ಪ, ಸಂಗಮೇಶ, ವಿನೋದ ಆಳ್ವಾ ಇತರರಿದ್ದರು. ಶೃತಿ ಮತ್ತು ಸಂಗಡಿಗರು ಪರಿಸರ ಗೀತೆ ಹಾಡಿದರು.
ರವಿ ತಂಡದವರಿಂದ ಮಾನವ ದೇಹದ ಅಂಗಾಂಗಳ ಪರಿಚಯ ಮಾಡಲಾಯಿತು. ೮ನೇ ತರಗತಿ ವಿದ್ಯಾರ್ಥಿಗಳು ಪರಿಸರ ರಕ್ಷಣೆ ಮತ್ತು ಕಾಡು ನಾಶದಿಂದಾಗುವ ಪರಿಣಾಮಗಳ ಕಿರು ನಾಟಕ ಪ್ರದರ್ಶಿಸಿದರು. ವಿಶ್ವಾರಾಧ್ಯ ಸ್ವಾಗತಿಸಿದರು. ಶಿಕ್ಷಕಿ ರೇಣುಕಾ ನಿರೂಪಣೆ ಮಾಡಿದರು. ವಾಮನರಾವ ಬಿರಾದಾರ ವಂದಿಸಿದರು.