ವಿದ್ಯಾರ್ಥಿಗಳಿಗೆ ನಂದಿನಿ ಹಾಲು ಉಚಿತ ವಿತರಣೆ

Photo=1
Published on

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಕಲಬುರಗಿ-ಬೀದರ್-ಯಾದಗಿರಿ ಹಾಲು ಒಕ್ಕೂಟದ ವತಿಯಿಂದ ಇಲ್ಲಿಯ ಸರಸ್ವತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಂದಿನಿ ಹಾಲಿನ ಬಾಟಲಿ ಹಾಗೂ ಚಾಕೊಲೇಟ್ ಉಚಿತವಾಗಿ ವಿತರಿಸಲಾಯಿತು. ನಂದಿನಿ ಹಾಲಿನ ಮಹತ್ವ ಮನವರಿಕೆ ಮಾಡಿಕೊಡಲಾಯಿತು.

ಒಕ್ಕೂಟದ ಮಾಜಿ ಅಧ್ಯಕ್ಷ, ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ, ಭೀಮರಾವ್ ಬಳತೆ, ಮಾರುಕಟ್ಟೆ ಉಪ ವ್ಯವಸ್ಥಾಪಕ ಶಾಲಿವಾನ್ ವಾಡೆ, ಸಹಾಯಕ ವ್ಯವಸ್ಥಾಪಕಿ ಮೀನಾಕುಮಾರಿ, ಮೇಲ್ವಿಚಾರಕ ಸೂರ್ಯಕಾಂತ, ನಂದಕುಮಾರ, ಸಾಯಿಕುಮಾರ, ದೀಪಕ್ ಅಷ್ಟಗಿಕರ್, ಗೌರಿಕಿರಣ, ಶಾಲೆಯ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net