ಮೈಸೂರು: ಸಾತಗಳ್ಳಿ ಎರಡನೇ ಹಂತದ ಲರ್ನರ್ಸ್ ಗ್ಲೋಬಲ್ ಸ್ಕೂಲ್ ಮತ್ತು ಪಿಯು ಕಾಲೇಜಿನಿಂದ ಅಂತಾರಾಷ್ಟ್ರೀಯ ಯುವ ಕೌಶಲ ದಿನದ ಅಂಗವಾಗಿ ಮೈಸೂರು ಗಣಿತ ಒಲಿಂಪಿಯಾಡ್ ಸ್ಪರ್ಧೆ ಆಯೋಜಿಸಲಾಗುತ್ತಿದೆ.
ಮೂಲ ಗಣಿತದ ಕೌಶಲ ಹೆಚ್ಚಿಸುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಲಾಗಿದ್ದು, ವಿವಿಧ ವಯೋಮಾನದ ಐದು ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂದು ಸಂಸ್ಥೆ ಸಂಸ್ಥಾಪಕ ಎನ್.ಮುರಳಿಮೋಹನ್ ಕೊನರೆಡ್ಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದು ಮತ್ತು ಎರಡನೇ ತರಗತಿ, 3 ಮತ್ತು 4ನೇ ತರಗತಿ, 5 ಮತ್ತು 6ನೇ ತರಗತಿ, 7 ಮತ್ತು 8ನೇ ತರಗತಿ, 9 ಮತ್ತು 10ನೇ ತರಗತಿ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಆಸಕ್ತರು ಸರೋರ್ದನ್ ಅವರನ್ನು ಮೊ.9916933202 ಅಥವಾ 8861533946 ಸಂಪರ್ಕಿಸುವಂತೆ ಕೋರಿದರು.
ವಿಶ್ವಸಂಸ್ಥೆಯು ಜುಲೈ 15 ಅನ್ನು ವಿಶ್ವ ಕೌಶಲ ದಿನ ಎಂದು ಘೋಷಿಸಿದೆ. ಆ ದಿನ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಗುವುದು. ಜೂನ್ ತಿಂಗಳಿನಲ್ಲಿ ವಿವಿಧ ದಿನಾಂಕದಲ್ಲಿ ಸ್ಪರ್ಧೆ ನಡೆಸಿ ಮೌಲ್ಯಮಾಪನ ಮಾಡಲಾಗುವುದು. ಈ ಮೂಲಕ ವಿದ್ಯಾರ್ಥಿಗಳು ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸವಾಲು ಹೋಗಲಾಡಿಸಲು ಇದು ನೆರವು ನೀಡಲಾಗುವುದು ಎಂದು ಅಭಿಪ್ರಾಯಪಟ್ಟರು.
ಯೋಗಗುರು ಶಿವಪ್ರಕಾಶ್, ಸಂಸ್ಥೆಯ ಸಂಜಯ್ ದತ್ತ ಇದ್ದರು.