

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಮುಳ್ಳೂರು ಗ್ರಾ.ಪಂ ಹಾಗೂ ಪಿಎಂಎಸ್‌ಆರ್ ಸಂಸ್ಥೆ ವತಿಯಿಂದ ಮಕ್ಕಳ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು.
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಸುಪ್ರೀತ್ ಮಾತನಾಡಿ, ಮಕ್ಕಳು ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ವಿದ್ಯಾರ್ಥಿ ದೆಸೆಯಲ್ಲಿಯೇ ಕಾನೂನು ಅರಿವು ಹೊಂದಬೇಕೆಂದು ಎಂದು ಸಲಹೆ ನೀಡಿದರು. ಪೋಕ್ಸೋ ಕಾಯ್ದೆ ಹಾಗೂ ಸೈಬರ್ ಕ್ರೈಂ ಕುರಿತು ಮಕ್ಕಳಿಗೆ ಕಾನೂನು ಅರಿವು ಮೂಡಿಸಿದರು. ಮುಳ್ಳೂರು ಗ್ರಾಮದ ಸಮಾಜ ಸೇವಕ ಮಂಜುನಾಥ್ ಕಳೆದ ಐದು ವರ್ಷಗಳಿಂದ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಲೇಖನ ಸಾಮಗ್ರಿಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಮುಳ್ಳೂರು ಗ್ರಾ.ಪಂ. ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ಮಹೇಶ್, ಸದಸ್ಯರಾದ ಕಾಂತಮ್ಮ, ಚಂದ್ರುಬಾಬು, ಮಹದೇವಮ್ಮ, ಕಮಲಮ್ಮ, ಚಂದ್ರಕಲಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ, ಸಮಾಜ ಸೇವಕ ಮಂಜುನಾಥ್, ಪಿಎಂಎಸ್‌ಆರ್ ಸಂಸ್ಥೆಯ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದ ಮತ್ತು ಮುಖಂಡರಿದ್ದರು.