ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ವಿತರಣೆ

23cmy5
Published on

ಚಿಂತಾಮಣಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಸಂಸ್ಥೆಯಿಂದ ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲಾ ಮಕ್ಕಳಿಗೆ ಉಚಿತವಾಗಿ ಮಾಸ್ಕ್‌ಗಳನ್ನು ನೀಡುತ್ತಿದ್ದೇವೆ ಎಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ರೋಟರಿ ಸಂಸ್ಥೆ ಅಧ್ಯಕ್ಷ ಶಿವಮೂರ್ತಿ ತಿಳಿಸಿದರು.

ತಾಲೂಕಿನ 14 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಮಾಸ್ಕ್‌ಗಳನ್ನು ಬಿಇಒ ಎಚ್.ಜಿ.ಸುರೇಶ್ ಅವರಿಗೆ ಮಂಗಳವಾರ ಹಸ್ತಾಂತರಿಸಿ ಮಾತನಾಡಿದರು.ಸುಮಾರು 2.5 ಲಕ್ಷ ಮಾಸ್ಕ್‌ಗಳನ್ನು ಪರೀಕ್ಷಾ ಕೇಂದ್ರಗಳಿಗೆ ನೀಡಿದ್ದು, ಚಿಂತಾಮಣಿಯಲ್ಲಿ ಸಂಸ್ಥೆ ಇಲ್ಲದಿದ್ದರೂ ಮಕ್ಕಳ ಹಿತದೃಷ್ಟಿಯಿಂದ ತಾಲೂಕಿನ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಮಾಸ್ಕ್ ನೀಡಿದ್ದೇನೆ ಎಂದರು.

ಬಿಇಒ ಎಚ್.ಜಿ.ಸುರೇಶ್ ಮಾತನಾಡಿ, ಮಕ್ಕಳು ಎಂದಿನಂತೆ ಪರೀಕ್ಷೆ ಎದುರಿಸಬಹುದು. ಕರೊನಾ ಬಗ್ಗೆ ಯಾವುದೇ ಭಯ ಬೇಡ. ಪರೀಕ್ಷಾ ಕೇಂದ್ರಕ್ಕೆ ನಿಗಧಿತ ಸಮಯಕ್ಕಿಂತ ಮೊದಲೇ ಹಾಜರಾಗಿ ಕರೊನಾ ತಪಾಸಣೆ ನಡೆಸಿದ ನಂತರ ಪರೀಕ್ಷೆ ಬರೆಯುವಂತೆ ಕೋರಿದರು.

ಶ್ರೀನಿವಾಸಪುರ ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಮಂಜುನಾಥ ರೆಡ್ಡಿ, ಖಜಾಂಚಿ ಎಂ.ಬೈರೇಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಜನಾರ್ಧನ ರೆಡ್ಡಿ, ನಿರ್ದೇಶಕ ಹಾಗೂ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಮುನಿರೆಡ್ಡಿ, ತಾಲೂಕಿನ ಪ್ರೌಢಶಾಲಾ ಮುಖ್ಯ ಶಿಕ್ಷಕ ಆರ್.ವೆಂಕಟರವಣರೆಡ್ಡಿ, ಆರ್.ನಾರಾಯಣರೆಡ್ಡಿ, ಕೆ.ಎನ್. ರಮಣಾರೆಡ್ಡಿ, ಸರಸ್ವತಿ, ಮಲ್ಲಿಕಾರ್ಜುನ್, ಶಿವಣ್ಣ, ವೆಂಕಟೇಶ್ವರಲು, ಬಿಇಒ ಕಚೇರಿಯ ರಾಜಣ್ಣ, ಮುರಳೀಕೃಷ್ಣ, ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net