ವಿದ್ಯಾರ್ಥಿಗಳಿಗೆ ಆರ್​ವೈಎಲ್​ಎ ಕಾರ್ಯಾಗಾರ

Rotary club
Published on

ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಎರಡು ದಿನಗಳವರೆಗೆ ರೋಟರಿ ಯೂಥ್ ಲೀಡರ್​ಶಿಪ್ ಅವಾರ್ಡ್ಸ್ (ಆರ್​ವೈಎಲ್​ಎ) ಕಾರ್ಯಾಗಾರ ದೇಶಪಾಂಡೆ ನಗರದ ರೋಟರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.

80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ತರಬೇತಿದಾರರಾದ ಮುತ್ತುರಾಜ ಬಡಿಗೇರ, ಮೋಹನರಾಜ ಇಲ್ಲೂರ, ನಿವೇದಿತಾ ಶ್ರೀನಾಥ, ಪಲ್ಲವಿ ಮಾಲನಿ, ಡಾ. ಸುಗನ್ಯಾದೇವಿ ಅವರು ಮಾರ್ಗದರ್ಶನ, ಸಾರ್ವಜನಿಕ ಭಾಷಣ, ಶೈಕ್ಷಣಿಕ ಹಾಗೂ ಮನೋವಿಜ್ಞಾನ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಮಿಸ್ಟರ್ ಆರ್​ವೈಎಲ್​ಎ, ಮಿಸ್ ಆರ್​ವೈಎಲ್​ಎ ಎಂದು ಸತ್ಕರಿಸಿ ಬಹುಮಾನ ನೀಡಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.

ಕ್ಲಬ್ ಅಧ್ಯಕ್ಷ ನಿಫಾ ಮೆಹತಾ, ಕಾರ್ಯದರ್ಶಿ ಡಾ. ನಾಗರೇಖಾ ಹೆಬಸೂರ, ವಿದ್ಯಾ ಹೊನವಾಡ, ರಾಜೇಶ್ವರಿ ವಾಸುಕಿ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net