

ತುಮಕೂರು: ಪಾವಗಡ ಪಟ್ಟಣದಲ್ಲಿ ಸವಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯಗಳು ಶಾಲೆ, ಕಾಲೇಜುಗಳಿಂದ ದೂರವಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ಥಳಾಂತರಿಸಬೇಕು ಎಂದು ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ನೇತೃತ್ವದಲ್ಲಿ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿದ ತಿಮ್ಮರಾಯಪ್ಪ, ಪಟ್ಟಣದಲ್ಲಿ ಸವಾಜ ಕಲ್ಯಾಣ ಇಲಾಖೆ 24 ಕೋಟಿ ರೂ ವೆಚ್ಚದಲ್ಲಿ 5 ವಸತಿ ನಿಲಯಗಳನ್ನು ಕ್ರ್ತ್ಯೈಸ್ಟ್ ಸಂಸ್ಥೆ ವತಿಯಿಂದ ನಿರ್ಮಿಸಲು ಮುಂದಾಗಿದ್ದು ವಿದ್ಯಾರ್ಥಿಗಳಿಗೆ ಪ್ರಯೋಜನವಾಗದ ಸ್ಥಳ ಆಯ್ದುಕೊಂಡಿದ್ದಾರೆ ಎಂದರು.
ಪಿಯು, ಪದವಿ ಕಾಲೇಜುಗಳು ಚಳ್ಳಕೆರೆ, ಕಲ್ಯಾಣ ದುರ್ಗ ರಸ್ತೆಯಲ್ಲಿದ್ದರೆ, ವಿದ್ಯಾರ್ಥಿನಿಲಯಗಳನ್ನು ತುಮಕೂರು ರಸ್ತೆಯಲ್ಲಿ ನಿರ್ವಾಣ ವಾಡಲಾಗುತ್ತಿದೆ. ಹಾಸ್ಟೆಲ್‌ಗೂ,ಕಾಲೇಜಿಗೂ 5ಕಿಮೀ ದೂರವಿದೆ. ಬೆಳಗ್ಗೆ ತಿಂಡಿ ತಿಂದು ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟಕ್ಕೆ ಮತ್ತೆ ಐದು ಕಿಮೀ ನಡೆದು ಹೋಗಬೇಕು, ಅಲ್ಲಿಂದ ಪುನಃ ಕಾಲೇಜಿಗೆ ಬರಬೇಕು. ಹಾಗಾಗಿ ದಿನಪೂರ್ತಿ ನಡೆಯುವುದೇ ಕೆಲಸವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸದಾ ಬಿಸಿಲಿನಿಂದಲೇ ಇರುವ ಪಾವಗಡದಲ್ಲಿ ವಿದ್ಯಾರ್ಥಿಗಳು ನಡೆದಾಡಿಕೊಂಡೆ ಇದ್ದರೆ ಅವರ ಆರೋಗ್ಯಕ್ಕೂ ಸಮಸ್ಯೆಯಾಗಲಿದೆ, ಓದಲು ಅಡ್ಡಿಯಾಗುವುದರಿಂದ ಕೂಡಲೇ ಈ ಅವೈಜ್ಞಾನಿಕ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು, ವಿದ್ಯಾರ್ಥಿ ಸ್ನೇಹಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಹಿಂದೆ ಸದರಿ ಜಾಗದಲ್ಲಿ ಹಾಸ್ಟೆಲ್ ನಿರ್ವಾಣಕ್ಕೆ ಮುಂದಾದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ನಿರ್ವಾಣ ಕಾರ್ಯ ಸ್ಥಗಿತಗೊಳಿಸಿದ್ದರು. ಆದರೆ ಏಕಾಎಕಿ ವಾರದಿಂದ ಅಡಿಪಾಯಕ್ಕೆ ಮಣ್ಣು ತೆಗೆಯುವ ಕೆಲಸ ನಡೆಯುತ್ತಿದೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಕಾಲೇಜಿಗೆ ಹತ್ತಿರದಲ್ಲಿಯೇ ಸರ್ವೆ ನಂಬರ್ 178ರಲ್ಲಿ 13 ಎಕರೆ ಸರ್ಕಾರಿ ಜಾಗವಿದ್ದು, ಒಂದೇ ಜಾಗದಲ್ಲಿ ಇಷ್ಟು ಹಾಸ್ಟೆಲ್‌ಗಳನ್ನು ನಿರ್ಮಿಸಬಹುದಾಗಿದೆ. ಅಲ್ಲದೆ ಕಾಲೇಜಿನ ಬಳಿಯೇ ಸುವಾರು 30 ಗುಂಟೆ ಸರ್ಕಾರಿ ಜಾಗವಿದೆ. ಅಲ್ಲಿಯೂ ಒಂದು ಹಾಸ್ಟೆಲ್ ಕಟ್ಟಡ ನಿರ್ಮಿಸಬಹುದು ಎಂದು ಸಲಹೆ ನೀಡಿದರು.
ತಾಲೂಕು ಆಡಳಿತ 5 ಕಿಮೀ ದೂರದಲ್ಲಿ ಹಾಸ್ಟಲ್ ನಿರ್ಮಿಸಲು ಹೊರಟಿರುವುದು ಸರಿಯಲ್ಲ, ಜಿಲ್ಲಾಡಳಿತ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಕಾಲೇಜು ಹತ್ತಿರದಲ್ಲಿಯೇ ಹಾಸ್ಟಲ್ ನಿರ್ವಾಣಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಸ್ಥಳೀಯ ಮುಖಂಡರಾದ ಗೋಪಾಲ್, ರಮೇಶ್, ಪದ್ದಣ್ಣ, ಸಿ.ಕೆ.ತಿಪ್ಪೇಸ್ವಾಮಿ, ನರಸಿಂಹಪ್ಪ, ನಟರಾಜು ಮತ್ತಿತರರು ಇದ್ದರು.
ಹೆಣ್ಣುಮಕ್ಕಳಿಗೆ ರಕ್ಷಣೆ ಸಿಗುತ್ತೆ : ಪಟ್ಟಣದಲ್ಲಿ ಹಲವು ಕಟ್ಟಡಗಳು ಶಿಥಿಲಗೊಂಡಿದ್ದು, ಕಚೇರಿಗಳು ಬೇರೆಡೆಗೆ ಸ್ಥಳಾಂತರಗೊಂಡಿದ್ದರಿಂದ ಜಾಗಗಳು ಖಾಲಿ ಇವೆ. ಅಲ್ಲದೆ ಪಟ್ಟಣ ಪಂಚಾಯಿತಿ ಸುತ್ತಮುತ್ತ ಮೂರು ಎಕರೆಗೂ ಹೆಚ್ಚು ಜಾಗ ಖಾಲಿ ಇವೆ. ಅಲ್ಲಿ ಹಾಸ್ಟೆಲ್ ನಿರ್ವಾಣ ವಾಡಿದರೆ ಹೆಣ್ಣುಮಕ್ಕಳಿಗೆ ರಕ್ಷಣೆ ಇರುತ್ತದೆ ಎಂದು ಪಾವಗಡ ತಾಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್ ಹೇಳಿದರು.
ಜಾಗದ ಕುರಿತು ಸವಾಜ ಕಲ್ಯಾಣ ಇಲಾಖೆ ಪರಿಶೀಲಿಸಿ ವರದಿ ನೀಡಲು ಸಮಾಜ ಕಲ್ಯಾಣ ಇಲಾಖೆ ಜೆಡಿಗೆ ಸೂಚಿಸುತ್ತೇನೆ, ನಂತರ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಿ ತೀರ್ಮಾನಿಸೋಣ.
ವೈ.ಎಸ್.ಪಾಟೀಲ್ ಜಿಲ್ಲಾಧಿಕಾರಿ