

ರಾಮದುರ್ಗ: ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸ್ಟೇಟ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ರಾಮದುರ್ಗದಲ್ಲಿ ಪಿಯುಸಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ರಕ್ಷಾ ಬಂಧನ ಆಚರಿಸಲಾಯಿತು.
ಪರಸ್ಪರ ಸಹೋದರ-ಸಹೋದರಿಯರ ಸಂಗಮದೊಂದಿಗೆ ಕಾಲೇಜ್ ಆವರಣದಲ್ಲಿ ವಿದ್ಯಾರ್ಥಿನಿಯರಿಂದ ವಿದ್ಯಾರ್ಥಿಗಳಿಗೆ ರಾಕಿ ಕಟ್ಟಿಸುವ ಮೂಲಕ ಹೆಣ್ಣು ಮಕ್ಕಳ ಕಾಲಿಗೆ ವಿದ್ಯಾರ್ಥಿಗಳು ನಮಸ್ಕರಿಸಿ ಸಹೋದರತ್ವ ಸಂದೇಶ ಸಾರುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಾಚಾರ್ಯ ಕೆ.ಎಚ್.ಹೊಸೂರ ಮಾತನಾಡಿದರು.
ಬೆನಕಟ್ಟಿ ವರದಿ: ನೂಲ ಹುಣ್ಣಿಮೆ ನಿಮಿತ್ತ ಗ್ರಾಮದಲ್ಲಿ ಯುವತಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಶುಭಾಶಯ ಕೋರಿದರು. ಗ್ರಾಮದಲ್ಲಿ ಎಲ್ಲ ಅಂಗಡಿಗಳಿಂದ ವಿಧವಿಧವಾದ ರಾಖಿಯನ್ನು ತಂದು ಸಹೋದರರಿಗೆ ಕಟ್ಟಿ ಆರತಿ ಬೆಳಗಿ ಸಹೋರತ್ವದ ಬಾಂಧವ್ಯ ಗಟ್ಟಿಗೊಳಿಸಿದರು.