

ಗೋಣಿಕೊಪ್ಪ: ಗೋಣಿಕೊಪ್ಪ ಪ್ರೌಢಶಾಲೆಯ ಟೈಗರ್ ಪಗ್ ಪರಿಸರ ಸಂಘದಿಂದ ಪಿರಿಯಾಟ್ಟಣ ಕೆರೆ ದಂಡೆಯಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ 61 ಬಗೆಯ ಪಕ್ಷಿಗಳನ್ನು ಗುರುತಿಸಲಾಯಿತು.
ಕೆರೆ ದಡದಲ್ಲಿ ನಡಿಗೆ ಮೂಲಕ ಪಕ್ಷಿ ವೀಕ್ಷಣೆ ಮಾಡಲಾಯಿತು. ಮೂರು ಬಗೆಯ ಮಿಂಚುಳ್ಳಿ, ಗದ್ದೆ ಗೊರವ, ಮೂರು ಬಗೆಯ ಬಕ, ಎರಡು ಬಗೆಯ ನೀರು ಕಾಗೆ, ಬ್ರಾಂಜ್ ವಿಂಗ್ಡ್ ಜಾಕನ, ಪರ್ಪಲ್ ಸ್ವಾಂಪ್ ಹೆನ್, ಗ್ರೇಟರ್ ಸ್ಪಾಟ್ ಈಗಲ್, ಹಳದಿ ಪಾದದ ಪಾರಿವಾಳ, ಚುಕ್ಕಿ ಚೋರೆ, ಹೆಜ್ಜಾರ್ಲೆ, ಬ್ಲಾಕ್ ವಿಂಗ್ಡ್ ಸ್ಟಿಲ್ಟ್, ಗ್ರೀಬ್, ಕೋಗಿಲೆ, ಮೂರು ಬಗೆಯ ಬುಲ್ ಬುಲ್…ಹೀಗೆ ಸುಮಾರು 61 ಬಗೆಯ ಹಕ್ಕಿಗಳನ್ನು ಗುರುತಿಸಲಾಯಿತು.
ಜೀವ ವಿಜ್ಞಾನ ಶಿಕ್ಷಕ ಡಿ.ಕೃಷ್ಣ ಚೈತನ್ಯ ಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಪಕ್ಷಿಗಳ ವಿಧ, ವರ್ಗೀಕರಣ, ಗಾತ್ರ, ಆಹಾರ ಸೇವನೆಗೆ ಅನುಗುಣವಾಗಿ ಕೊಕ್ಕು ಮತ್ತು ಪಾದಗಳ ಮಾರ್ಪಾಡು, ವಿವಿಧ ಭಾಗಗಳ ಪರಿಚಯ ಮಾಡಿಕೊಟ್ಟರು. ಶಿಕ್ಷಕಿ ಜ್ಯೋತಿ ಇದ್ದರು.
ಫೋಟೋ : 31 ಜಿಕೆಪಿ 02
ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಪ್ರೌಢಶಾಲೆಯ ಟೈಗರ್ ಪಗ್ ಪರಿಸರ ಸಂಘದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.